ಮಾಡಿ ನೋಡಿ ತಗತೆ ವಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿ ರಾಜ್ಯಾದ್ಯಂತ ಮಳೆ ಅವಧಿಗೂ ಮುನ್ನ ಸುರಿದಿದೆ. ಎಲ್ಲಿ ನೋಡಿದರಲ್ಲಿ ತಗತೆ ಗಿಡಗಳು ಚಿಗುರಿವೆ. ಈ ತಗತೆ ಗಿಡವನ್ನು ತುಳು ಭಾಷೆಯಲ್ಲಿ `ತಜಂಕ್’ ಎನ್ನುತ್ತಾರೆ. ಇದೊಂದು ಹೇರಳವಾದ ಪೌಷ್ಠಿಕಾಂಶ ಹೊಂದಿದ ಸಸ್ಯ.`ಹಿತ್ತಿಲಗಿಡ ಮದ್ದಲ್ಲ’ ಎಂಬಂತೆ ಅನೇಕ ಮಂದಿಗೆ ಈ ಗಿಡದ ಮಹಿಮೆ ಇನ್ನೂ ತಿಳಿದಿಲ್ಲ. ಇದೊಂದು ಅದ್ಭುತ ಶಕ್ತಿಹೊಂದಿದ ಸಸ್ಯ. ಸಮೃದ್ಧ ಆಹಾರವೂ ಹೌದು. ತಜಂಕ್ ಸೊಪ್ಪಿನ ಪಲ್ಯ, ಚಟ್ನಿ, ತಂಬುಳಿ, ದೋಸೆ, ಬೋಂಡಾ ವಡೆ ಎಲ್ಲವೂ ಅತ್ಯಂತ ರುಚಿಕರ.

ಬೇಕಾಗುವ ಸಾಮಗ್ರಿ:

ತಗತೆ ಸೊಪ್ಪು ಮೂರು ಮುಷ್ಠಿ
ತೆಂಗಿನ ತುರಿ ಒಂದು ಕಪ್
ಎರಡು ಹಸಿ ಮೆಣಸಿನ ಕಾಯಿ
ಈರುಳ್ಳಿ ಎರಡು
ಒಂದು ಚಮಚ ಜೀರಿಗೆ
ಒಂದೂವರೆ ಲೋಟ ಅಕ್ಕಿ ಹಿಟ್ಟು
ಕಾಲು ಲೋಟ ಕಡಲೆಹಿಟ್ಟು
ಹಿಂಗು
ರುಚಿಗೆ ಬೇಕಾದಷ್ಟು ಉಪ್ಪು.

ಮಾಡುವ ವಿಧಾನ:

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ತಗತೆ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಕ್ಕಿ ಹಿಟ್ಟು ಹಾಗೂ ಕಡಲೆ ಹಿಟ್ಟುಗಳನ್ನು ಸರಿಯಾಗಿ ಮಿಶ್ರಣ ಮಾಡಿ ನೀರಿನೊಂದಿಗೆ ದಪ್ಪಗೆ ಕಲಸಿಟ್ಟುಕೊಳ್ಳಿ. ಅದಕ್ಕೆ ಉಪ್ಪು, ಅರಶಿನ, ಚಿಟಿಕೆ ಮೆಣಸಿನ ಹುಡಿ ಸೇರಿಸಿಕೊಳ್ಳಿ. ಹೆಚ್ಚಿಟ್ಟುಕೊಂಡ ತಗತೆ ಸೊಪ್ಪು, ನೀರುಳ್ಳಿ, ಹಸಿಮೆಣಸು, ಜೀರಿಗೆ , ತೆಂಗಿನ ತುರಿಯನ್ನು ಸೇರಿಸಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಿ. ನಂತರ ಸಣ್ಣ ಉಂಡೆಗಳನ್ನು ಮಾಡಿ ವಡೆಯಂತೆ ಚಪ್ಪಟೆಯಾಗಿ ತಟ್ಟಿ. ಬಾಣಲೆಯಲ್ಲಿ ಎಣ್ಣೆಯಿಟ್ಟು ಹದಾ ಬಿಸಿಯಲ್ಲಿ ಗರಿ ಗರಿಯಾಗಿ ಕರಿದಿಟ್ಟುಕೊಳ್ಳಿ. ಊಟದೊಂದಿಗೆ ಅಥವಾ ಚಹಾದೊಂದಿಗೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!