Sunday, December 3, 2023

Latest Posts

CINE| ತಮಿಳು ನಟನಿಂದ ನಿತ್ಯಾ ಮೆನನ್‌ಗೆ ಕಿರುಕುಳ! ನಟಿ ರಿಯಾಕ್ಷನ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌತ್ ನಟಿ ನಿತ್ಯಾ ಮೆನನ್ ಸೌತ್ ಟು ನಾರ್ತ್ ನ ಹಲವು ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ನಡುವೆ ನಿತ್ಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ತಮಿಳು ಇಂಡಸ್ಟ್ರಿಯ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿಗೆ ನಿತ್ಯಾ ಖಡಕ್‌ ಆಗಿ ಉತ್ತರಿಸಿದ್ದು, ಸುಳ್ಳು ಮಾಹಿತಿ ಹರಡದಂತೆ ಸೂಚಿಸಿದರು.

ಆ ಸುದ್ದಿ ಏನೆಂದರೆ.. “ನನಗೆ ಇದುವರೆಗೂ ತೆಲುಗು ಇಂಡಸ್ಟ್ರಿಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ನಾನು ತಮಿಳು ಇಂಡಸ್ಟ್ರಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದೆ. ಚಿತ್ರೀಕರಣದ ವೇಳೆ ತಮಿಳು ಚಿತ್ರರಂಗದ ನಟನೊಬ್ಬ ನನಗೆ ಕಿರುಕುಳ ನೀಡಿದ್ದತು” ಎಂಬ ಸುದ್ದಿ ತಮಿಳು ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತಮಿಳು ವಿಮರ್ಶಕ ಮನೋಬಾಲಾ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದರು.

ಈ ಕುರಿತು ನಿತ್ಯಾ ಮೆನನ್‌ ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ಇಷ್ಟು ಕೆಳಮಟ್ಟಕ್ಕಿಳಿಯುವ ಸುದ್ದಿ ಬರೆಯುವುದು ತುಂಬಾ ದುಃಖಕರವಾಗಿದೆ, ಇದಕ್ಕಿಂತ ಉತ್ತಮವಾಗಿರಿ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಟ್ವಿಟ್ಟರ್‌, ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!