ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಿಎಂ ಸಿದ್ದರಾಮಯ್ಯ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈಗಾಗಲೇ ಮಲೆ ಮಹದೇಶ್ವರನ ದರುಶನ ಪಡೆದ ಸಿಎಂ ತದನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪ್ರಾಧಿಕಾರದಿಂದ ನಡೆಯುತ್ತಿರುವ ಸಾಮೂಹಿಕ ವಿವಾಹಕ್ಕೆ ಸಿಎಂ ಸಾಕ್ಷಿಯಾಗಲಿದ್ದು, ವಧುವರರಿಗೆ ಶುಭ ಹಾರೈಸಲಿದ್ದಾರೆ.
ಪುತ್ರ ಡಾ. ಯತೀಂದ್ರ ಸಿಎಂಗೆ ಸಾಥ್ ನೀಡಿದ್ದು, ಕಾರ್ಯಕ್ರಮ ಮುಗಿದ ನಂತರ ಸಿಎಂ ಬೆಟ್ಟದ ತಪ್ಪಲಿನಲ್ಲಿ ಇರುವ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿಯೇ ಮಧ್ಯಾಹ್ನದವರೆಗೂ ಸಮಯ ಕಳೆಯಲಿದ್ದಾರೆ.
ತದನಂತರ ಚಾಮರಾಜನಗರಕ್ಕೆ ತೆರಳಿ ಕೆಡಿಪಿ ಸಭೆ ನಡೆಸಲಿದ್ದಾರೆ. ಸಾಮಾನ್ಯವಾಗಿ ಚಾಮರಾಜನಗರಕ್ಕೆ ತೆರಳಲು ಯಾವುದೇ ಸಿಎಂ ಹಿಂದೇಟು ಹಾಕುತ್ತಾರೆ. ಏಕೆಂದರೆ ಚಾಮರಾಜನಗರಕ್ಕೆ ಭೇಟಿ ಕೊಡುವ ಸಿಎಂ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮಾತಿದೆ.
ಈ ಹಿಂದೆ 1991ರಲ್ಲಿ ಚಾಮರಾಜನಗರಕ್ಕೆ ಆಗಿನ ಸಿಎಂ ವೀರೇಂದ್ರ ಪಾಟೀಲ್ ಭೇಟಿ ನೀಡಿದ್ದರು. ಅದಾದ ನಂತರ ಯಾವುದೇ ಸಿಎಂ ಚಾಮರಾಜನಗರಕ್ಕೆ ಕಾಲಿಟ್ಟಿರಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿ ಮೂಢನಂಬಿಕೆ ತೊಡೆದು ಹಾಕಲಿದ್ದಾರೆ.