ಆದಿವಾಸಿಗಳ ತಾಂಡಾಕ್ಕೆ ನಿತ್ಯಾ ಮೆನನ್ ಭೇಟಿ: ಅಲ್ಲಿನ ನಿವಾಸಿಗಳೊಂದಿಗೆ ಹೊಸ ವರ್ಷಾಚರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಲಯಾಳಿ ಸುಂದರಿ ನಿತ್ಯಾ ಮೆನನ್ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ನಿತ್ಯಾ ಮೆನನ್ ಆದಿವಾಸಿಗಳು ವಾಸಿಸುವ ಹಳ್ಳಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಿತ್ಯಾಮಿನನ್ ತಿರುಪತಿ ಜಿಲ್ಲೆಯ ವರದಯ್ಯಪಾಲೆಂನಲ್ಲಿರುವ ಕಲ್ಕಿ ಆಶ್ರಮಕ್ಕೆ ಹೋಗಿದ್ದರು. ಅಲ್ಲಿರುವ ಆದಿವಾಸಿಗಳ ತಾಂಡಾಕ್ಕೆ ತೆರಳಿ ಅವರೊಂದಿಗೆ ಒಂದು ವಾರ ಕಾಲ ಕಳೆಯಲಿದ್ದಾರೆ.

ಈ ಬಾರಿಯ ಹೊಸ ವರ್ಷಾಚರಣೆಯನ್ನು ಅಲ್ಲಿನ ಜನರೊಂದಿಗೆ ಆಚರಿಸಲಾಗುವುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ನಿತ್ಯಾ ಮೆನನ್ ಅಲ್ಲಿನ ಜನರೊಂದಿಗೆ ಬೆರೆತು ಅವರ ಮಕ್ಕಳನ್ನು ಎತ್ತು ಆಡಿಸಿ ಮುದ್ದಿಸಿದ್ದಾರೆ.

ಅಲ್ಲಿನ ಕಲ್ಕಿ ಆಶ್ರಮದ ಜತೆಗೆ ಈ ವಾರ ಆದಿವಾಸಿಗಳೊಂದಿಗೆ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ. ನಿತ್ಯಾ ಮೆನನ್ ಬುಡಕಟ್ಟು ಜನರೊಂದಿಗೆ ಸುತ್ತಾಡುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!