ಮದುವೆ ದಿನ ವರನಿಗೆ ಯಾವ ವಧುವೂ ಇಂಥ ಉಡುಗೊರೆ ನೀಡಿರೋದಿಲ್ಲ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಣ್ಣು ಮಕ್ಕಳಿಗೆ ಅಪ್ಪನ ಪ್ರೀತಿ ಹೇಗೆ ಜಾಸ್ತಿಯೋ ಹಾಗೆ ಗಂಡುಮಕ್ಕಳು ಅಮ್ಮನನ್ನು ಹೆಚ್ಚು ಪ್ರೀತಿಸ್ತಾರೆ. ತಾಯಿಗೆ ಸಂಬಂಧಿಸಿದ ಮುದ್ದಾದ ವಿಡಿಯೋ ಒಂದನ್ನು ವಧು, ವರನಿಗಾಗಿ ತಯಾರಿಸಿದ್ದಾರೆ.

ವರನ ತಾಯಿ ಆತ ಹೈಸ್ಕೂಲ್‌ನಲ್ಲಿ ಇದ್ದಾಗಲೇ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಮದುವೆಯ ದಿನ ಅಮ್ಮ ಇಲ್ಲ ಎನ್ನುವ ಕೊರತೆ ಎದ್ದು ಕಾಣುತ್ತದೆ. ಇದಕ್ಕಾಗಿ ವಧು ಐಡಿಯಾವೊಂದನ್ನು ಮಾಡಿದ್ದು, ವರನ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ.
ಕ್ಯಾನ್ಸರ್​ನಿಂದ ತೀರಿಹೋದ ವರನ ಅಮ್ಮ ತೆರೆಯ ಮೇಲೆ ಮೂಡಿದಾಗ; ಮದುವೆಯ ದಿನ ಬಿಕ್ಕಳಿಸಿದ ನವಜೋಡಿತಾಯಿ ಜೊತೆ ಇರುವ ಹಳೆ ವಿಡಿಯೋವೊಂದನ್ನು ಮದುವೆ ಮನೆಯಲ್ಲಿ ಆಕೆ ಪ್ಲೇ ಮಾಡಿದ್ದಾಳೆ. ಇದನ್ನು ನೋಡಿದ ವರನ ಕಣ್ಣಿನಲ್ಲಿ ನೀರು ಜಿನುಗಿದೆ. ತನ್ನ ಮದುವೆಯಲ್ಲಿ ತಾಯಿ ಅನುಪಸ್ಥಿತಿ ಕಾಣಬಾರದು ಎನ್ನುವ ಕಾರಣಕ್ಕೆ ವಧು ಈ ರೀತಿ ಮಾಡಿದ್ದಾಳೆ. ಪ್ರೀತಿಯಿಂದ ನೀಡಿದ ಸರ್ಪೈಸ್‌ಗೆ ಪತಿ ಭಾವುಕರಾಗಿದ್ದು, ಇಬ್ಬರೂ ಕಣ್ಣೀರು ಸುರಿಸಿ ತಾಯಿ ಈಗಲೂ ಇರಬೇಕಿತ್ತು ಎಂದು ನೊಂದುಕೊಂಡಿದ್ದಾರೆ.

https://www.instagram.com/reel/CkOho5-tmr8/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!