ಮದುವೆಗೂ ಮುನ್ನ ಒಂದು ರೂಮ್ ತುಂಬುಷ್ಟು ಸ್ನೇಹಿತರಿದ್ದು, ಎಲ್ಲಿಗೆ ಹೋದ್ರೂ ಗ್ಯಾಂಗ್‌ನಲ್ಲಿ ಹೋಗಿಬರುತ್ತಿದ್ದರು. ಆದರೆ ಮದುವೆ ನಂತರ ಎಲ್ಲ ಸ್ನೇಹಿತರು ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿದ್ದಾರೆ… ಈ ಭಾವನೆ ನಿಮಗೂ ಬಂದಿದ್ಯಾ? ಸ್ನೇಹ ಉಳಿಸಿಕೊಳ್ಳೋಕೆ ಸಣ್ಣ ಪ್ರಯತ್ನ ಹೀಗೆ ಮಾಡಿ..
- ಸ್ನೇಹಿತರ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲರನ್ನೂ ಒಟ್ಟುಗೂಡಿಸೋ ಪ್ರಯತ್ನ ಮಾಡಿ, ಅಟ್‌ಲೀಸ್ಟ್ ಸರ್ಪೈಸ್ ಗಿಫ್ಟ್ ನೀಡಿ.
- ನಿಮ್ಮ ಪತಿ ಅಥವಾ ಪತ್ನಿಯನ್ನು ಸ್ನೇಹಿತರಿಗೆ ಪರಿಚಯ ಮಾಡಿಕೊಡಿ, ಎಲ್ಲರೂ ಒಂದೇ ಗ್ಯಾಂಗ್ ಎನಿಸುವಂತೆ ಇರಿ.
- ಸ್ನೇಹವೂ ನಿಮ್ಮ ಪ್ರಿಯಾರಿಟಿ ಲಿಸ್ಟ್‌ನಲ್ಲಿರಲಿ, ಆಪ್ಷನ್ ಆಗೋದು ಬೇಡ.
- ದಿನಕ್ಕೊಂದು ಮೆಸೇಜ್, ವಾರಕ್ಕೊಂದು ಕಾಲ್ ಮಾಡಬಹುದಲ್ವಾ?
- ಸ್ನೇಹಿತರ ಜೊತೆ ಟ್ರಿಪ್ ಪ್ಲಾನ್ ಮಾಡಿ, ಇದು ನಿಮ್ಮ ಸ್ನೇಹವನ್ನು ಜೀವಂತವಾಗಿಡುತ್ತದೆ.
- ಅವರ ಕಷ್ಟ, ಸಮಸ್ಯೆಗಳ ಬಗ್ಗೆ ಮಾತನಾಡಿ, ಆಗಾಗ ಭೇಟಿ ಮಾಡಿ
- ಪತಿ ಅಥವಾ ಪತ್ನಿಗೆ ಸ್ನೇಹಿತರ ಜೊತೆ ಮಿಂಗಲ್ ಆಗೋಕೆ ಇಷ್ಟ ಎಲ್ಲ ಎಂದು ನೀವು ಅವರನ್ನು ಬಿಟ್ಟುಬಿಡಬೇಡಿ, ಇಬ್ಬರಿಗೂ ಪರ್ಸನಲ್ ಲೈಫ್ ತುಂಬಾನೇ ಮುಖ್ಯ.
- ಕೆಲವರಿಗೆ ನಿಮ್ಮನ್ನು ಭೇಟಿ ಮಾಡೋದಕ್ಕೆ ಅಥವಾ ನಿಮ್ಮ ಜೊತೆ ಮಾತನಾಡೋದಕ್ಕೆ ಸಮಯ ಆಗದೇ ಇರಬಹುದು, ಪುನಃ ಅವರು ಸಿಕ್ಕಾಗ ನೀವೇ ಮಾತನಾಡಿಸಿ.