ಬಿಜೆಪಿ ಸೇರ್ಪಡೆ ಇನ್ನೂ ನಿರ್ಧಾರ ಕೈಗೊಂಡಿಲ್ಲ: ಸುಮಲತಾ ಅಂಬರೀಶ್

ಹೊಸದಿಗಂತ ವರದಿ, ಮಂಡ್ಯ:

ಬಿಜೆಪಿ ಸೇರ್ಪಡೆ ವಿಚಾರವಾಗಿ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸಾರ್ವಜನಿಕರ ಜತೆ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ತಟಸ್ಥರಾಗಿ ಉಳಿಯಲು ನಿರ್ಧರಿಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ್ಲೆಕ್ಸ್‌ನಲ್ಲಿ ಅವರ ಅಭಿಮಾನಕ್ಕೆ ನನ್ನ ೆಟೋಗಳನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿಕೊಂಡಿದ್ದಾರೆ. ಸಚ್ಚಿದಾನಂದಗೆ ನನ್ನ ಬೆಂಬಲವಿದೆ ಅನ್ನೋದು ಸಿಕ್ರೇಟ್ ಏನಿಲ್ಲ. ನಾನೇ ಬಹಿರಂಗವಾಗಿ ನನ್ನ ಬೆಂಬಲವನ್ನ ಸಚ್ಚಿದಾನಂದಗೆ ಇದೆ ಎಂದು ಹೇಳಿದ್ದೇನೆ ಎಂದರು.
ಜನರನ್ನು ಸಂಪರ್ಕಿಸಿ, ಚರ್ಚಿಸಿ ಅವರು ಏನು ನಿರ್ಧಾರ ತೆಗೆದು ಕೊಳ್ತಾರೊ ಅದಕ್ಕೆ ನಾನು ಬದ್ಧ. ಸದ್ಯಕ್ಕೆ ಯಾವ ಪಕ್ಷ ಸೇರುವುದು ಬೇಡ ತಟಸ್ಥರಾಗಿರಿ ಎಂದು ಜನ ಹೇಳಿದ್ದಾರೆ ಎಂದು ತಿಳಿಸಿದರು.
ಸಚ್ಚಿದಾನಂದ ಅವರು ್ಲೆಕ್ಸ್‌ಗಳಲ್ಲಿ ನನ್ನ ೆಟೋವನ್ನು ಹಾಕಿದ್ದಾರೆ ಎಂಬ ಮಾತ್ರಕ್ಕೆ ಬೇರೆ ಬೇರೆ ಅರ್ಥಗಳನ್ನ ಕಲ್ಪಿಸುವುದು ಬೇಡ. ಸ್ವಾಭಿಮಾನಿ ಪಡೆ ಪಕ್ಷ ಕಟ್ಟುವ ವಿಚಾರವಾಗಿ ನಗುತ್ತಲೇ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಅಷ್ಟು ಶಕ್ತಿ ದೇವರು ಕೊಡಲಿ, ನಿಮ್ಮ ಮಾತು ನಿಜಾ ಆಗಲಿ, ಸದ್ಯ ಆತರದ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.
ನಿನ್ನೆ ಗುರುವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ವಿಚಾರವನ್ನ ಪ್ರಸ್ತಾಪಿಸಲಾಗಿ, ಅವರು ಕೂಲಂಕುಶವಾಗಿ ಪರಿಶೀಲಿಸಿ ಬಳಿಕ ಸೂಚನೆ ನೀಡುತ್ತೇನೆಂದು ಭರವಸೆ ನೀಡಿದ್ದಾರೆ. ಮಂಡ್ಯಕ್ಕೆ ಪ್ರವೇಶ ಮತ್ತು ಹೊರಹೋಗುವ ವಿಚಾರವನ್ನೂ ಸಹ ಪ್ರಸ್ತಾಪಿಸಿರುವೆ. ಖಂಡಿತ ಮಂಡ್ಯದ ಜನತೆಗೆ ಒಳ್ಳೆಯದಾಗುತ್ತೆ ಅನ್ನೋ ಭರವಸೆ ನೀಡಿದ್ದಾರೆ ಎಂದು ಉತ್ತರಿಸಿದರು.
ವಿಧಾನಸೌಧದ ಪಡಸಾಲೆಯಲ್ಲಿ 10.5 ಲಕ್ಷ ರೂ. ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರೋದು ನೋವಾಗುತ್ತದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಈ ಪ್ರಕರಣದ ಹಿಂದೆ ಯಾರಿದ್ದಾರೋ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!