ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ಜಿಲ್ಲೆಯಾದ್ಯಂತ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವೇಳೆ ಜಿಲ್ಲಾಡಳಿತ ಹಾಗೂ ಪೊಲೀಸರು ಡಿಜೆ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದರು. ಇದು ಸಾರ್ವಜನಿಕರ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಡಿಜೆ ಸೌಂಡ್ ಗಳಿಗೆ ಏಕಾಏಕಿ ನಿಷೇಧ ಹೇರಿರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂದು ಡಿಜೆ ಮಾಲೀಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ಕ್ರಮದಿಂದಾಗಿ ಡಿಜೆ ಸೌಂಡ್ಸ್ ಮಾಲೀಕರಿಗೆ ತೊಂದರೆಯಾಗಿದೆ. ಡಿಜೆಯ ದಿಢೀರ್ ನಿಷೇಧಕ್ಕೆ ಡಿಜೆ ಮಾಲೀಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ಹಬ್ಬದಲ್ಲಿ ಹೊಟ್ಟೆ ಮೇಲೆ ಹೊಡೆಯುವ ನಿರ್ಧಾರ ತೆಗೆದಕೊಂಡಿದ್ದಾರೆ. ಸಾಲ ಸೋಲ ಮಾಡಿ ಡಿಜೆ ಸಿಸ್ಟಮ್ಗಳನ್ನು ತಂದಿದ್ದೇವೆ. ಈಗಾಗಲೇ ಅಡ್ವಾನ್ಸ್ ತೆಗೆದುಕೊಂಡಿದ್ದೇವೆ. ಈಗ ಬ್ಯಾನ್ ಮಾಡಿದ್ದಾರೆ. ಜಿಲ್ಲಾಡಳಿತದ ನಿರ್ಧಾರದಿಂದ ನಮಗೆ ನಷ್ಟವಾಗುತ್ತಿದೆ. ನಿಷೇಧ ಹೇರಬೇಡಿ ಎಂದು ಡಿಜೆ ಮಾಲೀಕರು ಮನವಿ ಮಾಡಿದ್ದಾರೆ.