ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕರಣವನ್ನು ದಿಕ್ಕು ತಪ್ಪಿಸಲು ರೇಣುಕಾಸ್ವಾಮಿ ಹತ್ಯೆಯ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು. ದರ್ಶನ್, ಮೂಡಾ ವಿಚಾರ ಬಿಡ್ರಪ್ಪ. ಮಹಾದಾಯಿ ವಿಚಾರದಲ್ಲಿ ಏನಾಗಿದೆ ಮಾತನಾಡಿ, ಭದ್ರಾ ಮೇಲ್ದಂಡೆ ದುಡ್ಡು ಕೊಡಿಸ್ರಪ್ಪ. ಆಮೇಲೆ ಅವರ ಮಾತಿನ ಬಗ್ಗೆ ಉತ್ತರ ಕೊಡೋಣ.
ಕೇಂದ್ರದಿಂದ 5,300 ಕೋಟಿ ಹಣ ಬಂದಿಲ್ಲ. ಸಿಎಂ ಜೊತೆ ಮೊದಲು ಚರ್ಚೆ ಮಾಡ್ತೇವೆ. ನಂತರ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಹೇಳ್ತೇವೆ ಅಂತ ಡಿಕೆಶಿ ಹೇಳಿದ್ದಾರೆ.