ʻನೀವು ಮದುವೆಯಾಗಿ ಖುಷಿಯಾಗಿದ್ದೀರ, ಪ್ರೀತಿಯಲ್ಲಿರಬೇಕಾದ ನಾನಿನ್ನೂ ಓದುತ್ತಿದ್ದೇನೆʼ: ತೇಜಸ್ವಿ ಯಾದವ್‌ಗೆ ಯುವತಿ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻನೀವು ಮದುವೆಯಾಗಿ ಸಂತೋಷವಾಗಿದ್ದೀರಿ ಪ್ರೀತಿಯಲ್ಲಿರಬೇಕಾದ ನಾನು ಪ್ರಚಲಿತ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತಿದ್ದೇನೆʼ ಎಂದು ಯುವತಿಯೊಬ್ಬರು ಬಿಹಾರ ಉಪ ಸಿಎಂ ತೇಜಸ್ವಿ ಯಾದವ್ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಟ್ನಾದ ಪಿಂಕಿ ಎಂಬ ಯುವತಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಪತ್ರ ಬರೆದು ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ..ಪ್ರೇಮಿಗಳ ದಿನ ಸಮೀಪಿಸುತ್ತಿದೆ..ನನ್ನ ನಿರುದ್ಯೋಗದ ಕಾರಣದಿಂದ ಅವರಿಗೆ ಪ್ರಪೋಸ್ ಮಾಡಲು ಸಾಧ್ಯವಾಗುತ್ತಿಲ್ಲ.

ಬಿಹಾರದಲ್ಲಿ ಬಹಳ ದಿನಗಳಿಂದ ಉದ್ಯೋಗಗಳನ್ನು ಭರ್ತಿ ಮಾಡಲು ಸರ್ಕಾರ ಆಸಕ್ತಿ ತೋರಿಸಿಲ್ಲ. ಉದ್ಯೋಗ ಅಧಿಸೂಚನೆ ಇಲ್ಲದ ಕಾರಣ ನಿರುದ್ಯೋಗಿಗಳು ಕಂಗಾಲಾಗಿದ್ದಾರೆ. ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನನ್ನ ನಿರುದ್ಯೋಗ ಅಡ್ಡಿಯಾಗಿದೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.

ನಾನು ಟಿವಿ ದೈನಿಕ ಸೋಪ್ ಒಪೆರಾ ಬನಾರಸ್ವಾಲಾ ಇಷ್ಕ್‌ನ ಚಿತ್ರಕಥೆಗಾರ ಪ್ರಭಾತ್ ಬಂಧುಲ್ಯ ಅವರನ್ನು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ನನ್ನ ನಿರುದ್ಯೋಗ ಸ್ಥಿತಿಯಿಂದ ಪ್ರೇಮಿಗಳ ದಿನದಂದು ನಾನು ಇನ್ನೂ ಒಂಟಿಯಾಗಿದ್ದೇನೆ..ನನಗೆ ಕೆಲಸ ಸಿಕ್ಕರೆ ನನ್ನ ಪ್ರೀತಿಯನ್ನು ಅವನಲ್ಲಿ ವ್ಯಕ್ತಪಡಿಸಲು ನಾನು ಬಯಸಿದ್ದೇನೆ. ಆದರೆ ನನ್ನ ಭರವಸೆ ಈಡೇರಿಲ್ಲ ಎಂಬ ಕಾರಣದಿಂದ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದೇನೆ. ನಿರುದ್ಯೋಗದಿಂದ ತನ್ನ ಆಸೆ ಈಡೇರುತ್ತಿಲ್ಲ ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆ ಕುರಿತು ಪತ್ರದ ಮೂಲಕ ನೇರವಾಗಿ ಉಪ ಮುಖ್ಯಮಂತ್ರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಧಿಸೂಚನೆ ಹೊರಬಿದ್ದರೂ ಲೀಕ್ ಆಗುತ್ತಿರುವುದರಿಂದ ಪರೀಕ್ಷೆ ನಡೆಸುತ್ತಿಲ್ಲ..ನನ್ನಂತಹವರು ಕಾಯುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.

ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ..ನನ್ನ ತಂದೆ ಬೇಗ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ಕೆಲಸವಿಲ್ಲದಿದ್ದರೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಹಾಗೆಯೇ ನನ್ನಪ್ಪ ನನ್ನನ್ನು ಬೇರೆಯವರೊಂದಿಗೆ ಮದುವೆ ಮಾಡುತ್ತಾರೆ. ಇದನ್ನೆಲ್ಲಾ ಯೋಚಿಸುತ್ತಾ ನನ್ನ ಪ್ರೀತಿಯನ್ನು ಪಡೆಯಲಾರೆ ಎಂಬ ಚಿಂತೆ. ನನಗೆ ಕೋಪ ಬರುತ್ತಿದೆ. ನಾನು ಈ ಪತ್ರವನ್ನು ಅನೇಕ ಭರವಸೆಗಳೊಂದಿಗೆ ಬರೆಯುತ್ತಿದ್ದೇನೆ ಅರ್ಥ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದಯವಿಟ್ಟು ನನಗೆ ಕೆಲಸ ಪಡೆಯಲು ಸಹಾಯ ಮಾಡಿ, ಇಲ್ಲದಿದ್ದರೆ ನಾನು ಪ್ರೀತಿಸಿದ ಪ್ರಭಾತ್ ಬೇರೊಬ್ಬನನ್ನು ಮದುವೆಯಾಗುತ್ತಾರೆ. ನನಗೆ ಕೆಲಸವಿಲ್ಲದಿದ್ದರೆ ನನ್ನ ಪ್ರೀತಿಯನ್ನು ಹೇಗೆ ಹೇಳಲಿ?ಇಂತಿ ನಿಮ್ಮ ಮತದಾರ ಮತ್ತು ಬರಹಗಾರ..ಪ್ರಭಾತ್ ಬಂಧುಲ್ಯ ಒನ್ ಸೈಡ್ ಲವರ್ ಪಿಂಕಿ (ಪಾಟ್ನಾದಿಂದ)” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!