ದೆಹಲಿ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದ ಕ್ರೀಡಾಪಟು: ಕೇಜ್ರಿವಾಲ್‌ ಉತ್ತರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ದೆಹಲಿಯ ದಿವ್ಯಾ ಕೊಚ್ರಾನ್ ಎಂಬ ಬಾಕ್ಸರ್‌ಗೆ ಪ್ರಧಾನ ಮಂತ್ರಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ. ಅವರಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಕೂಡ ಸೇರಿದ್ದಾರೆ. ಸಿಎಂ ಅಭಿನಂದನೆಗೆ ಧನ್ಯವಾದಗಳನ್ನು ತಿಳಿಸುತ್ತಾ ತಮ್ಮ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರವನ್ನು ಹೊರಹಾಕಿದ್ದಾರೆ.

ದೆಹಲಿ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಟ್ವೀಟ್ ಮಾಡಿದ ದಿವ್ಯಾ, ನನ್ನ ಯಶಸ್ಸಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ ದೆಹಲಿ ಸಿಎಂ ಕೇಜ್ರಿವಾಲ್ ಅವರಿಗೆ ಧನ್ಯವಾದಗಳು. ಆದರೆ ನನ್ನದೊಂದು ವಿನಂತಿ ಇದೆ ನಾನು 20 ವರ್ಷಗಳಿಂದ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಇಲ್ಲಿಂದ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಸರ್ಕಾರದಿಂದಿದುವರೆಗೂ ನನಗೆ ಯಾವುದೇ ನೆರವು ಸಿಕ್ಕಿಲ್ಲ. ದೆಹಲಿ ಸರ್ಕಾರದಿಂದ ನಗದು ಅಥವಾ ಉಡುಗೊರೆ ರೂಪದಲ್ಲಿ ಯಾವುದೇ ಸಹಾಯ ದೊರೆತಿಲ್ಲ. ಇನ್ನು ಮುಂದಾದರೂ ನನಗೆ ಸಹಾಯ ಸಿಗುತ್ತದೆಯೇ? ದೆಹಲಿಯ ಕುಸ್ತಿಪಟುಗಳು ಇತರ ರಾಜ್ಯಗಳನ್ನು ಪ್ರತಿನಿಧಿಸಿದರೂ, ಅವರಿಗೆ ಸಿಗುವ ಗೌರವ ನನಗೂ ಸಿಗುತ್ತದೆ ಎಂದು ಭಾವಿಸುತ್ತೇನೆ”ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ದೆಹಲಿ ಸರ್ಕಾರ ತಕ್ಷಣ ಪ್ರತಿಕ್ರಿಯಿಸಿ, ‘‘ದೇಶವನ್ನು ಪ್ರತಿನಿಧಿಸುವ ಎಲ್ಲ ಕ್ರೀಡಾಪಟುಗಳನ್ನು ನಮ್ಮ ಸರ್ಕಾರ ಗೌರವಿಸುತ್ತದೆ. ಸದ್ಯ ದಿವ್ಯಾ ಉತ್ತರ ಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿ ಪರವಾಗಿ ಆಡಿದರೆ ಅಥವಾ ದೆಹಲಿ ಸರ್ಕಾರದ ಕ್ರೀಡಾ ಯೋಜನೆಯ ಸದಸ್ಯರಾದರೆ ಸಹಾಯ ಮಾಡಲು ಸಿದ್ಧ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!