ರಾಜ್ಯದ ವಿಶೇಷ ಶಾಲೆಗಳಿಗಿಲ್ಲ ದಸರಾ, ಬೇಸಿಗೆ ರಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಸರ್ಕಾರವು ರಾಜ್ಯದ ವಿಶೇಷ ಶಾಲೆ ಮಕ್ಕಳಿಗೆ ದಸರಾ, ಬೇಸಿಗೆ ರಜೆಯನ್ನು ರದ್ದುಗೊಳಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಇತರೆ ಶಾಲೆಗಳಂತೆ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಶಿಶುಕೇಂದ್ರಿತ ಯೋಜನೆಯಡಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಬುದ್ಧಿಮಾಂದ್ಯ, ದೃಷ್ಟಿದೋಷ, ಶ್ರವಣದೋಷವಿರುವ ಮಕ್ಕಳ ವಿಶೇಷ ಶಾಲೆಗಳಿಗೂ ದಸರಾ ಹಾಗೂ ಬೇಸಿಗೆ ರಜೆಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷದಿಂದಲೇ ಜಾರಿಯಾಗುವಂತೆ ರಜೆ ರದ್ದು ಮಾಡಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ಶಿಕ್ಷಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!