Wednesday, June 7, 2023

Latest Posts

‘ಶೆಟ್ಟರ್‌ಗೆ ಯಾವ ಅನ್ಯಾಯವೂ ಆಗಿಲ್ಲ, ರಕ್ತದಲ್ಲಿ ಬರೆದುಕೊಡ್ತೀನಿ ಅವರು ಗೆಲ್ಲೋದಿಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಅವರಿಗೆ ನಾವೇನು ಅನ್ಯಾಯ ಮಾಡಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿ, ನನ್ನ ರಕ್ತದಲ್ಲಿ ಬರೆದುಕೊಡ್ತೇನೆ, ಶೆಟ್ಟರ್ ಗೆಲ್ಲೋದಿಲ್ಲ. ಇದು ನನ್ನ ಬಹಿರಂಗ ಹೇಳಿಕೆ. ಜಗದೀಶ್ ಶೆಟ್ಟರ್‌ನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ. ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತಿದ್ದೆವು ಇಲ್ಲಿ ನಿಮಗೆ ಎಲ್ಲಾದರೂ ಅನ್ಯಾಯ ಕಾಣುತ್ತಿದೆಯಾ?

ಸ್ವತಃ ಪ್ರಧಾನಿ ಮೋದಿ ಮಾತನಾಡಿ, ನಿಮ್ಮ ಪತ್ನಿಯನ್ನು ನಿಲ್ಲಿಸಿ ಟಿಕೆಟ್ ಕೊಡ್ತೇವೆ ಎಂದು ಹೇಳಿದ್ದರು. ಜೊತೆಗೆ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು ಎಂದರು. ಇಷ್ಟೆಲ್ಲಾ ಆದರೂ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್ ಸೇರಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ.

ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿ, ಶೆಟ್ಟರ್ ಹೀನಾಯ ಸೋಲು ಅನುಭವಿಸುವಂತೆ ಮಾಡಿ, ಇದು ಪಾಠವಾಗಲಿದೆ ಎಂದಿದ್ದಾರೆ. ದೊಡ್ಡ ರ‍್ಯಾಲಿ ಏರ್ಪಡಿಸೋಣ, ಮನೆಯಲ್ಲಿ ಕೂತ ಶೆಟ್ಟರ್‌ಗೆ ನಡುಕ ಹುಟ್ಟಿಸುವಂತಾಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!