Sunday, June 4, 2023

Latest Posts

ದಿನಭವಿಷ್ಯ: ನಿಮ್ಮ ವರ್ತನೆಯನ್ನು  ನೀವೇ ಪರಾಮರ್ಶೆಗೆ ಒಳಪಡಿಸಿ, ಆಗ ನಿಮ್ಮ ಸರಿ-ತಪ್ಪು ಅರಿಯುವುದು..

ಮೇಷ
ಆಪ್ತರ ಜತೆ ಬಿರುಕು ಮೂಡಿಸಲು ಕೆಲವರು ಯತ್ನಿಸುವರು. ಅದಕ್ಕೆ ಅವಕಾಶ ಕೊಡದಿರಿ. ಸಂಬಂಧದಲ್ಲಿ ನಂಬಿಕೆ ಮುಖ್ಯ. ಆತುರದ ನಿರ್ಧಾರ ಬೇಡ.

ವೃಷಭ
ಕೆಲಸದ ಒತ್ತಡ ಅಧಿಕ. ನೀವು ತಾಳ್ಮೆಯಿಂದ ವ್ಯವಹರಿಸಿದ್ದಾದರೆ ಎಲ್ಲವನ್ನು ಸರಿಯಾಗಿ ನಿಭಾಯಿಸುವಿರಿ. ಯಾರ ಜತೆಗೂ ವಾಗ್ವಾದ ನಡೆಸದಿರಿ.

ಮಿಥುನ
ದಿನವಿಡೀ ಅಸ್ಥಿರ ಭಾವನೆ, ಆತಂಕ ಕಾಡುವುದು. ಖಾಸಗಿ ಬದುಕಲ್ಲಿ  ನಡೆಯುವ ಕೆಲವು ಬೆಳವಣಿಗೆ ನಿಮ್ಮ ಮನಸ್ಸಿನ ನೆಮ್ಮದಿ ಕಲಕುವುದು.

ಕಟಕ
ನಿಮ್ಮ ವರ್ತನೆಯನ್ನು  ನೀವೇ ಪರಾಮರ್ಶೆಗೆ ಒಳಪಡಿಸಿ. ಆಗ ನಿಮ್ಮ ಸರಿ-ತಪ್ಪು ಅರಿಯುವುದು. ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರದಿರಿ.

ಸಿಂಹ
ಸವಾಲಿನ ದಿನ. ಖಾಸಗಿ ಬದುಕಲ್ಲಿ ಮತ್ತು ವೃತ್ತಿಯಲ್ಲಿ ಏರುಪೇರು  ಎದುರಿಸುವಿರಿ. ಭಾವನಾತ್ಮಕ ಸಂಘರ್ಷ. ಸಮಚಿತ್ತದಿಂದ ವ್ಯವಹರಿಸಿ.

ಕನ್ಯಾ
ವೃತ್ತಿಯಲ್ಲಿ ಸವಾಲು ಎದುರಿಸುವಿರಿ. ಇದೇವೇಳೆ, ಪ್ರೀತಿಯ ವಿಚಾರದಲ್ಲೂ ಅನಪೇಕ್ಷಿತ ಬೆಳವಣಿಗೆ. ಸಂಭಾಳಿಸಿಕೊಂಡು ಮುಂದುವರಿಯಿರಿ.

ತುಲಾ
ನಿಮ್ಮ ಪ್ರಯತ್ನಗಳು ಖಾಸಗಿ ಬದುಕಿನಲ್ಲಿ, ವೃತ್ತಿಯಲ್ಲಿ ನಿಮ್ಮ ಹೆಸರು ಜನಪ್ರಿಯಗೊಳ್ಳಲು ನೆರವಾಗುತ್ತವೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ವೃಶ್ಚಿಕ
ನಿಮ್ಮ ಕೆಲಸವನ್ನು ಮಾಡುತ್ತಾ ಹೋಗಿ. ಇತರರು ಏನು ಮಾಡುತ್ತಾರೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದಿರಿ. ಬಂಧುಗಳ ನೆರವು.

ಧನು
ಹೆಚ್ಚು ಸಂತೋಷ, ಹೆಚ್ಚು ಉತ್ಸಾಹ. ಕಾರ್ಯಸಿದ್ಧಿ. ಇದು ಇಂದಿನ ನಿಮ್ಮ ದಿನಚರಿ. ಆದರೆ ಭಾವುಕ ವಿಷಯಗಳಲ್ಲಿ ನೀವು ನೋವುಣ್ಣುವ ಪ್ರಸಂಗ ಬರಬಹುದು.

ಮಕರ
ಹೆಚ್ಚಿನ ವಿಶೇಷ ಇಲ್ಲದ ದಿನ. ಎಲ್ಲ ವ್ಯವಹಾರ ಸುಗಮ. ಕೌಟುಂಬಿಕ ಆಗುಹೋಗುಗಳು ಅಸಮಾಧಾನ ಸೃಷ್ಟಿಸಿದರೂ ಬಳಿಕ ನಿರಾಳತೆ.

ಕುಂಭ
ಆತ್ಮವಿಶ್ವಾಸದ ದಿನ. ಹಾಗಾಗಿ ಇಂದು ದಿಟ್ಟ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಡ. ಖಾಸಗಿ ಸಂಬಂಧದಲ್ಲಿ ಗೊಂದಲ,ಅನುಮಾನ ಉಂಟಾದೀತು.

ಮೀನ
ಹಣದ ವ್ಯವಹಾರಗಳಲ್ಲಿ  ಹೆಚ್ಚು ಎಚ್ಚರಿಕೆಯಿಂದ ವರ್ತಿಸಿ. ಕೆಲವು ವ್ಯವಹಾರಗಳು ನಿಮ್ಮ ಮೇಲೆ ಹೆಚ್ಚು ಒತ್ತಡ ತರುವುದು. ಖರ್ಚು ನಿಯಂತ್ರಿಸಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!