ಹಿಂದಿ- ಇಂಗ್ಲಿಷ್‌ಗಿಂತ ಯಾವುದೇ ಭಾಷೆ ಕಮ್ಮಿಯಲ್ಲ, ಎಲ್ಲಾ ಭಾರತೀಯ ಭಾಷೆಗಳೂ ರಾಷ್ಟ್ರಭಾಷೆ: ಕೇಂದ್ರ ಸಚಿವ ಪ್ರಧಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದಿ ಅಥವಾ ಇಂಗ್ಲಿಷ್‌ಗಿಂತ ಯಾವುದೇ ಭಾಷೆ ಕಡಿಮೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳೇ ಆಗಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಗುಜರಾತ್‌ ನಲ್ಲಿ ಆಯೋಜಿಸಲಾದ ಶಿಕ್ಷಣ ಸಚಿವರ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, “ಕಳೆದ ಹಲವು ದಿನಗಳಿಂದ ಭಾಷೆಗಳ ವಿಚಾರದಲ್ಲಿ ಹಲವು ಅನುಮಾನಗಳೆದ್ದಿವೆ. ಕನ್ನಡ- ಗುಜರಾತಿ- ತಮಿಳು- ಪಂಜಾಬಿ- ಅಸ್ಸಾಮಿ- ಬೆಂಗಾಲಿ ಅಥವಾ ಮರಾಠಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿದೆ. ಯಾವುದೇ ಭಾಷೆ ಹಿಂದಿ ಅಥವಾ ಇಂಗ್ಲಿಷ್‌ಗಿಂತ ಕಡಿಮೆಯಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಮುಖ್ಯಸ್ಥರಾದ ಡಾ.ಕೆ.ಕಸ್ತೂರಿರಂಗನ್ ಅವರು ಸ್ಥಳೀಯ ಭಾಷೆಗಳು ಅಥವಾ ಬುಡಕಟ್ಟು ಭಾಷೆಗಳನ್ನು ಸಂಬೋಧಿಸಲು ʼಮಾತೃಭಾಷೆಗಳುʼ ಎಂಬ ಪದ ಸೃಷ್ಟಿಸಿದ್ದಾರೆ. ಬಳಕೆಯಿಂದ ಮರೆಯಾಗುತ್ತಿರುವ ಭಾಷೆಗಳನ್ನು ತಂತ್ರಜ್ಞಾನದ ಸಹಾಯದಿಂದ ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದು ಪ್ರಧಾನ್ ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ‘ಪಿಎಂ ಶ್ರೀ ಶಾಲೆʼಗಳನ್ನು ಸ್ಥಾಪಿಸುವ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇವು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸ್ಥಾಪನೆಗೊಳ್ಳುತ್ತಿರುವ (ಎನ್ಇಪಿ) ಪ್ರಯೋಗಶಾಲೆಗಳಾಗಿವೆ ಎಂದು ಮಾತಿಹಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!