ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಇಲ್ಲ, ಭಾನುವಾರದಂದು ಕಠಿಣ ನಿರ್ಬಂಧ ಜಾರಿ: ಸಿಎಂ ಪಿಣರಾಯಿ ವಿಜಯನ್

ಹೊಸದಿಗಂತ ವರದಿ,ಕಾಸರಗೋಡು:

ಕೇರಳದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಅದರಂತೆ ಲಾಕ್‍ ಡೌನ್‍ನಂತೆಯೇ ನಿರ್ಬಂಧಗಳನ್ನು ಹೇರುವ ಮೂಲಕ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ. ಗುರುವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕೊರೋನಾ ಅವಲೋಕನಾ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗದೆ.
ಇದೇ ವೇಳೆ ಸಂಪೂರ್ಣ ಲಾಕ್‍ ಡೌನ್ ಹೇರದಿರಲು ಸಭೆಯು ನಿರ್ಧರಿಸಿತು. ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನ ಕೈಗೊಳ್ಳಲಾಯಿತು. ಇದರ ಅಂಗವಾಗಿ 10, 11, 12ನೇ ತರಗತಿಗಳನ್ನು ಸಹ ಮುಚ್ಚಲಾಗುವುದು. ಅವರಿಗೆ ಇತರ ತರಗತಿಗಳ ರೀತಿಯಲ್ಲಿಯೇ ಆನ್‍ಲೈನ್ ತರಗತಿಗಳಲ್ಲಿ ಪಠ್ಯ ಮುಂದುವರಿಯಲಿದೆ. ಈ ಮೊದಲು ಜ.21ರಿಂದ ಒಂದರಿಂದ ಒಂಭತ್ತನೇ ತರಗತಿ ವರೆಗೆ ಆನ್‍ಲೈನ್‍ನಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಶಾಲೆಗಳ ಸುತ್ತ ಕ್ಲಸ್ಟರ್‍ಗಳು ರಚನೆಯಾದ ಹಿನ್ನೆಲೆಯಲ್ಲಿ ಒಂದರಿಂದ 12ನೇ ತರಗತಿಗಳ ತನಕ ಆನ್‍ಲೈನ್‍ನಲ್ಲಿ ಕ್ಲಾಸ್ ಮುಂದುವರಿಸಲು ನಿರ್ಧರಿಸಲಾಯಿತು.
ಈ ಮಧ್ಯೆ ಮುಂದಿನ ಎರಡು ಭಾನುವಾರಗಳಂದು ನಿಯಂತ್ರಣಗಳನ್ನು ಬಿಗಿಗೊಳಿಸಲು ಅವಲೋಕನಾ ಸಭೆಯು ನಿರ್ಧರಿಸಿದೆ. ಇದನ್ನು ಅನುಸರಿಸಿ ಜ.23 ಮತ್ತು ಜ.30 ರಂದು ಲಾಕ್‍ ಡೌನ್‍ಗೆ ಸಮಾನವಾದ ನಿರ್ಬಂಧಗಳು ಜಾರಿಯಲ್ಲಿರಲಿವೆ. ಈ ದಿನಗಳಲ್ಲಿ ಅನಗತ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಅಂಗಡಿ, ವ್ಯಾಪಾರ ಸಂಸ್ಥೆ , ಮಾಲ್‍ಗಳನ್ನು ಮುಚ್ಚುವ ಅಗತ್ಯವಿಲ್ಲ. ಆದರೆ ಸ್ವಯಂ ನಿಯಂತ್ರಣಕ್ಕೆ ಸಾರ್ವಜನಿಕರು ಸಜ್ಜಾಗಬೇಕೆಂದು ಸಭೆಯು ಮನವಿ ಮಾಡಿದೆ.
ಚಿಕಿತ್ಸೆಗೆಂದು ಅಮೇರಿಕಾದಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲಿಂದಲೇ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್, ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ ಅಲ್ಲದೆ ವಿವಿಧ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!