ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಾರ್ಮುಲಾ ರೇಸ್ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಯುತ್ತಿರುವ ಮಧ್ಯೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ್ದು, ಪ್ರತಿಯೊಬ್ಬ ರಾಜಕೀಯ ನಾಯಕರು ಎಷ್ಟೇ ದೊಡ್ಡವರಾದರೂ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೆಲವರು ಜೈಲಿಗೆ ಹೋಗಿಲ್ಲ, ಅವರೂ ಹೋಗಬೇಕು, ಹೇಗಿದೆ ಅಂತ ಗೊತ್ತಾಗುತ್ತೆ, ಪ್ರತಿಯೊಬ್ಬ ರಾಜಕೀಯ ನಾಯಕರು ಎಷ್ಟೇ ದೊಡ್ಡವರಾದರೂ ಜೈಲಿಗೆ ಹೋಗಬೇಕಾಗುತ್ತದೆ, ಎಷ್ಟು ಮಂದಿ ಹೋಗುತ್ತಾರೋ ಹೋಗುವುದಿಲ್ಲವೋ ಗೊತ್ತಿಲ್ಲ. ಎಂದು ಓವೈಸಿ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಫಾರ್ಮುಲಾ-ಇ ರೇಸ್‌ಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಕೆಟಿ ರಾಮರಾವ್ (ಕೆಟಿಆರ್) ಭಾಗಿಯಾಗಿರುವ ಆರೋಪದ ಮೇಲೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ.