ಇನ್ಮುಂದೆ ಪಿವಿಆರ್‌ನಲ್ಲಿ ಜಾಹೀರಾತು ಹಾಕೋದಿಲ್ಲ, ಹಾಗಿದ್ರೆ ಇನ್‌ಕಮ್‌ ಗತಿ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿನಿಮಾ ನೋಡೋಕೆ ಹೋದೋರು, ಐದು ಹತ್ತು ನಿಮಿಷ ಲೇಟಾದ್ರೂ ಪರವಾಗಿಲ್ಲ ಇನ್ನೂ ಜಾಹೀರಾತು ಬರುತ್ತಿರುತ್ತದೆ ಎಂದುಕೊಳ್ತಾರೆ. ಆದರೆ ಇನ್ಮುಂದೆ ಜಾಹೀರಾತು ಬರೋದಿಲ್ಲ!

ಹೌದು,  ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಜಾಹೀರಾತು ಪ್ರಸಾರ ಸಂಪೂರ್ಣವಾಗಿ ನಿಲ್ಲಲಿದೆ. ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ನೀವು ಸಿನಿಮಾ ನೋಡಬಹುದಾಗಿದೆ. ಸಂಸ್ಥೆ ಈ ಬಗ್ಗೆ ನಿರ್ಣಯಕ್ಕೆ ಬಂದಿದ್ದು, ಇಡೀ ದಿನದ ಜಾಹೀರಾತು ಅವಧಿಯಲ್ಲಿ ಇನ್ನೊಂದು ಶೋ ಹೆಚ್ಚುವರಿಯಾಗಿ ಪ್ರದರ್ಶನ ಮಾಡಬಹುದು ಎಂದು ಕಂಪನಿ ನಿರ್ಧರಿಸಿದೆ.

ಪಿವಿಆರ್​-ಐನಾಕ್ಸ್​ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಇದು ಅನೇಕರಿಗೆ ಕಿರಿಕಿರಿ ಉಂಟು ಮಾಡಿದ್ದಿದೆ. ಟಿವಿಗಳಲ್ಲಿ ಜಾಹೀರಾತು ನೋಡಿದಂತೆ ಇಲ್ಲಿಯೂ ನೋಡಬೇಕಲ್ಲ ಎಂದು ಬೈದುಕೊಂಡವರು ಅನೇಕರಿದ್ದಾರೆ. ಈಗ ಇದನ್ನು ಬಂದ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮನಿ ಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ.

ಜಾಹೀರಾತು ಪ್ರದರ್ಶನಗಳಿಂದ ಪಿವಿಆರ್​ ಐನಾಕ್ಸ್​ಗೆ ದೊಡ್ಡ ಮಟ್ಟದ ಲಾಭ ಆಗುತ್ತಿದೆ. ಇದನ್ನು ನಿಲ್ಲಿಸಿದರೆ ಮುಂದೇನು ಎನ್ನುವ ಪ್ರಶ್ನೆ ಬರುತ್ತಿದೆ. ಜಾಹೀರಾತಿನ ಬದಲು ಒಂದು ಶೋನ ಹೆಚ್ಚುವರಿಯಾಗಿ ಪ್ರದರ್ಶಿಸಲು ಸಂಸ್ಥೆ ಮುಂದಾಗಿದೆ. ಇದರಿಂದ ಹೆಚ್ಚಿನ ಜನರು ಸಿನಿಮಾ ನೋಡಲು ಬರುತ್ತಾರೆ. ಇದರಿಂದ ಆಹಾರ ಹಾಗೂ ಪಾನೀಯಗಳ ಮಾರಾಟ ಕೂಡ ಹೆಚ್ಚುತ್ತದೆ ಅನ್ನೋದು ಸಂಸ್ಥೆಯ ಆಲೋಚನೆ.  ಇದನ್ನು ಪುಣೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ ಎನ್ನಲಾಗಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಎಲ್ಲ ಪಿವಿಆರ್‌ಗಳಲ್ಲಿಯೂ ಜಾಹೀರಾತು ಬಂದ್‌ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!