ರಾಜ್ಯದಲ್ಲಿ ಮಳೆ, ಬೆಳೆ ಇಲ್ಲ.. ತರಕಾರಿಗಳ ದರ ಕೇಳಂಗಿಲ್ಲ: ಗ್ರಾಹಕರ ಪರಿಸ್ಥಿತಿ ಕೇಳೋರ್ಯಾರು ಸ್ವಾಮಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮಳೆಯ ಅಭಾವ ಹಾಗೂ ಸುಡುವ ಬಿಸಿಲಿನಿಂದಾಗಿ ಕೆಲ ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಕಳೆದ ವಾರದಿಂದ ಕೆ.ಜಿ ಬೀನ್ಸ್ ಗೆ 170ರಿಂದ 200 ರೂ. ಗಡಿ ದಾಟಿದೆ. ಒಂದು ವಾರದಿಂದ ಮೆಣಸಿನಕಾಯಿ ಬೆಲೆ ಇದೇ ದಿಕ್ಕಿನತ್ತ ಸಾಗಿದೆ.

ನಗರವು ನೆರೆಯ ಗ್ರಾಮಾಂತರ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಬೀನ್ಸ್ ಮತ್ತು ಮೆಣಸಿನಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಪಡೆಯುತ್ತದೆ. ಈ ಎಲ್ಲ ಭಾಗಗಳಲ್ಲಿ ತಾಪಮಾನ ಹೆಚ್ಚಿದ್ದು, ಇಳುವರಿ ಗಣನೀಯವಾಗಿ ಕುಸಿದಿದೆ. ತಮಿಳುನಾಡಿನಿಂದ ಹೆಚ್ಚು ಕ್ಯಾರೆಟ್ ಬರುತ್ತಿದ್ದು, ಇದೇ ಪರಿಸ್ಥಿತಿಯಿಂದ ಅಲ್ಲಿನ ಬೆಲೆಯೂ ಹೆಚ್ಚಾಗಿದೆ.

ತರಕಾರಿಗಳಷ್ಟೇ ಅಲ್ಲ, ಹಣ್ಣುಗಳೂ ದುಬಾರಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಜೂನ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಈ ಬಾರಿ ಜೂನ್ ನಲ್ಲಿ ಉತ್ತಮ ಮಳೆಯಾದರೆ ಬೆಲೆ ಕುಸಿಯಬಹುದು ಎನ್ನುತ್ತಾರೆ ವ್ಯಾಪಾರಿಗಳು.

ತಿಂಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರು ಅಗತ್ಯ ತರಕಾರಿಗಳ ಬೆಲೆ ಏರಿಕೆಯಿಂದ ಇನ್ನಷ್ಟು ಕಂಗಾಲಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!