ಇಂದು ಹೈದರಾಬಾದ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ವೇಳಾಪಟ್ಟಿ ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಶನಿವಾರ ಸಂಜೆ ಹೈದರಾಬಾದ್ ತಲುಪಲಿದ್ದಾರೆ. ಎರಡು ದಿನಗಳ ಭೇಟಿಯ ಅಂಗವಾಗಿ ಸೆ.17ರಂದು ಬಿಜೆಪಿ ಆಯೋಜಿಸಿರುವ ತೆಲಂಗಾಣ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ರಾಜ್ಯದ ಪಕ್ಷದ ನಾಯಕರನ್ನು ಭೇಟಿಯಾಗಿ, ಪಕ್ಷವನ್ನು ಬಲಪಡಿಸುವುದಕ್ಕಾಗಿ ಪ್ರಸ್ತುತ ಮುಂಬರುವ ಅವಧಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ರಾಜ್ಯ ಪಕ್ಷದ ನಾಯಕರಿಗೆ ಅಮಿತ್ ಶಾ ನಿರ್ದೇಶನ ನೀಡಲಿದ್ದಾರೆ.

  • ಅಮಿತ್ ಶಾ ಶನಿವಾರ ರಾತ್ರಿ 7.20ಕ್ಕೆ ಹೈದರಾಬಾದ್ ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಸಿಆರ್‌ಪಿಎಸ್ ಸೆಕ್ಟರ್ ಮೆಸ್ ತಲುಪಿ ರಾತ್ರಿ ಅಲ್ಲಿಯೇ ವಾಸ್ತವ್ಯ.
  • 17ರಂದು ಬೆಳಗ್ಗೆ 9 ಗಂಟೆಗೆ ಸಿಕಂದರಾಬಾದ್ ಪರೇಡ್ ಮೈದಾನಕ್ಕೆ ಅಮಿತ್ ಶಾ ತಲುಪಲಿದ್ದಾರೆ. ಮೊದಲು ಸಶಸ್ತ್ರ ಪಡೆಗಳ ಗೌರವ ವಂದನೆ ಬಳಿಕ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಾಗುವುದು.
  •  ತೆಲಂಗಾಣ ವಿಮೋಚನಾ ದಿನ 11.10 ನಿಮಿಷಗಳವರೆಗೆ ಪರೇಡ್ ಮೈದಾನದಲ್ಲಿ ನಡೆಯಲಿದೆ.
  • ಮಧ್ಯಾಹ್ನ 1.45 ಗಂಟೆಗೆ ಶಂಶಾಬಾದ್ ವಿಮಾನ ನಿಲ್ದಾಣದಿಂದ ದೆಹಲಿಗೆ ಮಧ್ಯಾಹ್ನ 2.25 ಕ್ಕೆ ಹಿಂತಿರುಗುವ ಪ್ರಯಾಣವಿರುತ್ತದೆ.
  •  ತೆಲಂಗಾಣ ಬಿಜೆಪಿಯ ಪ್ರಮುಖ ಕಾರ್ಯಕರ್ತರನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ. ರಾಜ್ಯದ ಇತ್ತೀಚಿನ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಯಲಿದೆ.

ಕೇಂದ್ರ ಸಚಿವ ಅಮಿತ್ ಶಾ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ನಾಯಕರು ತಮ್ಮ ಪ್ರವಾಸದ ವೇಳೆ ಹಲವು ಸ್ಥಳೀಯ ಗಣ್ಯರನ್ನು ಭೇಟಿಯಾಗುತ್ತಿರುವುದು ಗೊತ್ತೇ ಇದೆ. ಈ ಕ್ರಮದಲ್ಲಿ ಪಿವಿ ಸಿಂಧು ಅವರನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!