ಜ್ವರ ಅಂತ ಸುಳ್ಳು ಹೇಳಿ ರಜೆ ತಗೊಳ್ಳುವವರು ನೀವಾಗಿದ್ದರೆ ? ಇನ್ಮುಂದೆ ನಿಮ್ಮ ಆಟ ನಡೆಯಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅನಾರೋಗ್ಯದ ನೆಪ ಹೇಳಿ ರಜೆ ಕೇಳುವುದು ಅನೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹೇಳಬಲ್ಲ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗೂ ಜರ್ಮನಿಯ
ರ್ಹೇನಿಶ್‌ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸ್‌ನ ಸಂಶೋಧಕರು ಕಂಡುಹಿಡಿದ್ದಾರೆ.

ಶೀತ, ಜ್ವರದ ನೆಪ ಹೇಳಿ ರಜೆ ಕೇಳುವವರಿಗಾಗಿಯೇ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಶೀತ ಅಥವಾ ಜ್ವರ ಬಂದಾಗ ನಮ್ಮ ಧ್ವನಿಯಲ್ಲಿ ಆಗುವ ಬದಲಾವಣೆಗಳನ್ನು ಗ್ರಹಿಸಿ, ಅನಾರೋಗ್ಯದ ಸತ್ಯಾಸತ್ಯತೆಯನ್ನು ಈ ತಂತ್ರಾಂಶ ಮೂಲಕ ಕಂಡುಕೊಳ್ಳಬಹುದು.

ಶೀತ ಹಾಗೂ ಸಾಮಾನ್ಯ ಸ್ಥಿತಿಯಲ್ಲಿರುವ ವ್ಯಕ್ತಿಯ ದನಿಯಲ್ಲಿ ಕಂಡುಬರುವ ಬದಲಾವಣೆಯನ್ನು ಗ್ರಹಿಸುವಲ್ಲಿ 65%ರಷ್ಟು ನಿಖರತೆಯನ್ನು ಸೂಚಿಸುವ ಈ ತಂತ್ರಾಂಶಕ್ಕೆ ಇನ್ನಷ್ಟು ಸುಧಾರಣೆಗಳನ್ನು ತರುವ ಪ್ರಯತ್ನವಾಗುತ್ತಿದೆ.

ಈ ಮೂಲಕ ಶೀತ, ಕೆಮ್ಮು ಹಾಗೂ ಜ್ವರದ ಸಮಸ್ಯೆಗಳನ್ನು ಹೊಂದಿರುವ ರೋಗಿಗಳನ್ನು ಪತ್ತೆ ಮಾಡಲು ಹಾಗೂ ಅದರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ಎಚ್ಚರವಹಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!