ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂವರು ಹೆಂಡತಿಯರನ್ನು ಹೊಂದುವುದನ್ನು ಬಯಸುವುದಿಲ್ಲ: ಹಿಮಂತ ಬಿಸ್ವಾ ಶರ್ಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿಗೆ ಮೂವರು ಹೆಂಡತಿಯರನ್ನು ಹೊಂದಲು ಬಯಸುವುದಿಲ್ಲ. ಯಾರಿಗೂ ಇದು ಬೇಕಾಗಿಲ್ಲ. ನೀವು ಯಾವುದೇ ಮುಸ್ಲಿಂ ಮಹಿಳೆಯನ್ನು ಕೇಳಬಹುದು. ಅವಳ ಪತಿ ಮೂವರು ಮಹಿಳೆಯರನ್ನು ಮದುವೆಯಾಗಬೇಕು ಎಂದು ಯಾರೂ ನಿಮಗೆ ಹೇಳುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಈ ಮೂಲಕ ದೇಶದಲ್ಲಿ ನಾಗರಿಕ ಸಂಹಿತೆ(ಯುಸಿಸಿ) ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದ ಅವರು, ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂವರು ಹೆಂಡತಿಯರನ್ನು ಹೊಂದುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದು ಅವನ ಸಮಸ್ಯೆಯಲ್ಲ. ಆದರೆ ಅದು ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರ ಸಮಸ್ಯೆ ಎಂದು ಹೇಳಿದರು.
ಮುಸ್ಲಿಂ ಮಹಿಳೆಯರು ಮತ್ತು ತಾಯಂದಿರಿಗೆ ಸಮಾಜದಲ್ಲಿ ಗೌರವ ನೀಡಬೇಕಾದರೆ ತ್ರಿವಳಿ ತಲಾಖ್(ಕಾನೂನು) ನಂತರ ಯುಸಿಸಿ ಜಾರಿಗೆ ತರಬೇಕು. ರಾಜ್ಯ ಕ್ಯಾಬಿನೆಟ್ ಈ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಇತರ ರಾಜ್ಯಗಳು ನಮ್ಮನ್ನು ಅನುಸರಿಸುತ್ತವೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!