ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬಿಸಿಲು ಲೆಕ್ಕಿಸದೆ ಜನ ಸರತಿ ಸಆಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಬೆಂಗಳೂರಿನ ಜಯನಗರದ ವ್ಯಾಪ್ತಿಗೆ ಬರುವ ಜೆ.ಪಿ. ನಗರ ಐದನೇ ಹಂತದಲ್ಲಿರುವ ಸಂವೇದ್ ಸ್ಕೂಲ್ ಮತಗಟ್ಟೆಯಲ್ಲಿ ಲಿಸ್ಟ್‌ನಲ್ಲಿ ಸಾಕಷ್ಟು ಜನರ ಹೆಸರು ನಾಪತ್ತೆಯಾಗಿದ್ದು, ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯೂ ಈ ರೀತಿ ಸಮಸ್ಯೆಗಳಾಗಿವೆ. ಬಿಸಿಲಿನಲ್ಲಿ ನಿಂತು ಕಾದು, ನಮ್ಮ ಹಕ್ಕು ಚಲಾಯಿಸಬೇಕು ಎಂದುಕೊಂಡಿದ್ದೇವೆ. ಆದರೆ ನಮ್ಮ ಸರದಿ ಬಂದಾಗ ಹೆಸರಿಲ್ಲ ಎಂದು ಹೇಳಿ ಕಳಿಸಿದ್ದಾರೆ. ಇದರ ಪರಿಹಾರವೂ ಯಾರಿಗೂ ಗೊತ್ತಿಲ್ಲ ಎಂದು ಮತದಾರರು ಹೇಳಿದ್ದಾರೆ.