October 10, 2026
Saturday, October 10, 2026
spot_img

ಹೈಕಮಾಂಡ್ ಭೇಟಿಗೆ ಆಕ್ಷೇಪ ಇಲ್ಲ, ಆದ್ರೆ ಪಕ್ಷಕ್ಕೆ ಅಗೌರವ ತೋರಿಸಿದ್ರೆ ಶಿಸ್ತು ಕ್ರಮ: ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಾರು ಬೇಕಾದರೂ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ. ಆದರೆ ಅನವಶ್ಯಕವಾಗಿ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಕ್ಷದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. .

25 ಜನ ಶಾಸಕರು ದೆಹಲಿಗೆ ತೆರಳಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ ಆದರೆ ಪಕ್ಷದ ಗೌರವನ್ನು ಕಾಪಾಡಬೇಕು. ಮಾಧ್ಯಮಗಳ ಮುಂದೆ ನಾನಾ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಅಗೌರವ ನೀಡಬಾರದು. ಮುಂದೆ ಅವರಿಗೆ ಭವಿಷ್ಯ ಪಕ್ಷದಲ್ಲಿದೆಯೇ ಇರಲಿದ್ದು, ಹೊರತು ಮಾಧ್ಯಮಗಳಲ್ಲಿ ಇಲ್ಲ ಎಂದರು.

ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಹಾಗೂ ಎರಡನೇ ಬಾರಿ ಗೆದ್ದಿರುವವರು ಮಂತ್ರಿಯಾಗಲು ಅರ್ಹರು. ಆದರೆ ಪ್ರಸುತ್ತ ಇದು ಸೂಕ್ತ ಸಮಯವಲ್ಲ. ಇನ್ನೂ ವಿವಿಧ ಕಡೆ ಚುನಾವಣೆಗಳು ನಡೆಯುತ್ತಿವೆ. ಹಾಗಾಗಿಮೊದಲು ಚುನಾವಣೆ ಆಗಲಿ ಬಳಿಕ ಈ ಕುರಿತು ಯೋಚಿಸೋಣ ಎಂದು ತಿಳಿಸಿದರು.

Must Read