May 12, 2026
Tuesday, May 12, 2026
spot_img

ಶಾಸಕರ ಅಭಿಪ್ರಾಯವಿಲ್ಲದೆ ಯಾರು ಮುಖ್ಯಮಂತ್ರಿ ಆಗಕ್ಕೆ ಆಗಲ್ಲ: ಡಿಕೆಶಿಗೆ ಟಾಂಗ್ ಕೊಟ್ರಾ ಸಿಎಂ ಸಿದ್ದರಾಮಯ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಾಸಕರ ಅಭಿಪ್ರಾಯವಿಲ್ಲದೆ ಯಾರು ಮುಖ್ಯಮಂತ್ರಿ ಆಗಕ್ಕೆ ಆಗಲ್ಲ, ಬಹುಮತ ಇದ್ದರೆ ಮಾತ್ರ ಸಿಎಂ ಆಗೋಕೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸಿಎಂ ಆಗೋಕೆ ಶಾಸಕರು ಮತ್ತು ಹೈಕಮಾಂಡ್ ಆಶೀರ್ವಾದವು ಇರಬೇಕು ಎಂದು ಹೇಳಿದರು. ಆ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !