ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಬಿ.ನಾಗೇಂದ್ರ

ಹೊಸದಿಗಂತ ವರದಿ, ರಾಯಚೂರು:

ಸಂಸದ ಅನಂತ ಕುಮಾರ್ ಹೆಗಡೆ ಮೂರ್ಖತನದ ಮಾತುಗಳನ್ನು ಆಡುತ್ತಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಸಂಸದರನ್ನು ಆ ಕ್ಷೇತ್ರ ಜನ ಹೇಗೆ ಗೆಲ್ಲಿಸಿದ್ದಾರೋ ಗೊತ್ತಿಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.

ಮಂಗಳವಾರ ಮಂತ್ರಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಂವಿಧಾನ ಇದ್ದದ್ದಕ್ಕೆ ನಾನು ಶಾಸಕ, ಮಂತ್ರಿಯಾಗಿದ್ದೇನೆ. ಪ್ರಧಾನಿ ಮೋದಿ ಅವರು ಸಹ ಸಂವಿಧಾನದಿoದಲೇ ನಾನು ಪ್ರಧಾನಿಯಾಗಿದ್ದೇನೆ ಅಂತ ಹೇಳುತ್ತಾರೆ ಎಂದರು.
ಆದರೆ, ಅವರ ಪಕ್ಷದ ಸಂಸದ ಗೆದ್ದು ಬಂದ ಕೂಡಲೇ ಸಂವಿಧಾನ ಬದಲಿಸುತ್ತೇವೆ ಅಂತಾರೆ. ಸಂವಿಧಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಮೂರ್ಖರು ಎಷ್ಟು ಹೇಳಿದರು ಬದಲಾಗಲ್ಲ ಎಂದು ಹೇಳಿದರು.

ಸೂರ್ಯ, ಚಂದ್ರ ಸಾಕ್ಷಿಯಾಗಿ ಹೇಳ್ತೇನೆ, ಸಂವಿಧಾನ ಯಾರ ಕೈಯಿಂದ ಬದಲಿ ಮಾಡೋಕೆ ಸಾಧ್ಯವಿಲ್ಲ ಇಂಥ ಮೂರ್ಖರು ಎಷ್ಟು ಹೇಳಿದರೂ ಬದಲಾಗಲ್ಲ. ಅವರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಅವರ ವಿರುದ್ಧ ರಾಜ್ಯದಲ್ಲಿ, ಅವರ ಕ್ಷೇತ್ರದಲ್ಲೂ ಗೋ ಬ್ಯಾಕ್ ಅನ್ನೋ ಪರಿಸ್ಥಿತಿ ಬರುತ್ತೆ ಎಂದರು

ಸಂವಿಧಾನ ಬದಲಾದರೆ ರಕ್ತಪಾತವಾಗುತ್ತೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ. ಸಂವಿಧಾನ ಇಲ್ಲದಿದ್ದರೆ ನೂರಕ್ಕೆ ನೂರರಷ್ಟು ರಕ್ತಪಾತವಾಗುತ್ತದೆ. ಸಂವಿಧಾನ ಬಿಟ್ಟು ನಡೆದುಕೊಳ್ಳುವುದಾದರೆ ನಮಗೆ ವಾಕ್ ಸ್ವಾತಂತ್ರö್ಯವೂ ಇರುವುದಿಲ್ಲ ಎಂದು ತಿಳಿಸಿದರು.
ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ, ಪಕ್ಷಕ್ಕೆ ಸಂಬoಧವಿಲ್ಲ ಅಂತ ರಾಮುಲು ಹೇಳಿಕೆ ವಿಚಾರವಾಗಿ ಮಾತನಾಡಿ, ರಾಮುಲು ಅವರಿಗೆ ರಾಜ್ಯದ ಪರಿಸ್ಥಿತಿ ಗಮನಿಸುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಮಾಜಿ ಸಚಿವರು, ಪ್ರಭಾವಿ ಸಚಿವರಾಗಿ ಕೆಲಸ ಮಾಡಿ ಸೋತಿದ್ದಾರೆ. ಇಂಥ ಕೆಲಸ ಮಾಡಿಕೊಂಡೇ ಅವರು ಸೋತಿದ್ದಾರೆ. ಈ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಖಂಡಿತ ಬಿದ್ದೇ ಬೀಳತ್ತೆ. ಸಂವಿಧಾನದ ಪರ ೮೦ ಇದ್ದಾರೆ. ಸಂವಿಧಾನದ ವಿರೋಧಿಗಳು ಒಂದು ಪರ್ಸೆಂಟ್ ಇದ್ದಾರೆ. ಅಂಬೇಡ್ಕರ್ ಸಂವಿಧಾನ ಬದಲಿ ಮಾಡೋಕೆ ಇವರಿಂದ ಏನು ಆಗಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!