ಸಿಎಎ ವಿರುದ್ಧ ದೇಶ, ರಾಜ್ಯದಲ್ಲಿಯೂ ಪರ, ವಿರೋಧ ವ್ಯಕ್ತವಾಗುತ್ತಿದೆ: ಸಚಿವ ಬಿ.ನಾಗೇಂದ್ರ

ಹೊಸದಿಗಂತ ವರದಿ, ರಾಯಚೂರು:

ಸಿಎಎ ವಿರುದ್ಧ ದೇಶದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ಕೆಲ ರಾಜ್ಯದಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ. ನಮ್ಮ ರಾಜ್ಯದಲ್ಲೂ ಆಗುತ್ತಿದೆ. ಬಿಜೆಪಿಯವರು ಬಂದ ಮೇಲೆ ಸಂವಿಧಾನ ಸೇರಿ, ನಮ್ಮ ಜೀವನ ಶೈಲಿ, ನಮ್ಮ ಆಹಾರ ಪದ್ದತಿ ಬದಲಿ ಮಾಡಲು ಹೋಗುತ್ತಿದ್ದಾರೆ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.

ಮಂಗಳವಾರ ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಮತದಾರರು ಎಚ್ಚೆತ್ತುಕೊಳ್ಳಬೇಕು. ಹೀಗೆ ಬಿಟ್ಟರೆ ತುಗಲಕ್ ದರ್ಬಾರ್ ಆಗುತ್ತೆ, ಭಾರತೀಯರು ಪ್ರಬುದ್ಧರಿದ್ದಾರೆ ಯಾರಿಗೆ ಮತ ಕೊಟ್ಟರೆ ಏನಾಗುತ್ತೆ ಅಂತ ಅರಿತುಕೊಳ್ಳಬೇಕು ಎಂದರು.

ಬಳ್ಳಾರಿಯಲ್ಲಿ ಶಂಕಿತ ಉಗ್ರ ಓಡಾಟ ವಿಚಾರವಾಗಿ ತಿಳಿಸಿದ ಸಚಿವ ಬಿ.ನಾಗೇಂದ್ರ, ನಾವು ಶಾಂತಿ ಪ್ರಿಯರು. ವ್ಯಾಪಾರ ವಹಿವಾಟಿನ ಮೇಲೆ ಆಧಾರವಾಗಿದ್ದಾರೆ ಜನ. ಇಂಡಸ್ಟ್ರೀಸ್ ಮೇಲೆ ಜನ ಬದುಕು ಸಾಗಿಸುತ್ತಿದ್ದಾರೆ. ಆದರೆ ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಗೆ ಬಂದು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿ ಲಾ ಆಂಡ್ ಆರ್ಡರ್ ತುಂಬ ಕಠೀಣವಾಗಿ ಮಾಡುತ್ತಿದ್ದೇವೆ, ಬಳ್ಳಾರಿಗೆ ನಂಟಿದೆ ಅಂದ್ರೆ, ಬಳ್ಳಾರಿಯಲ್ಲಿ ಅಂತ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಅಂದರೆ ಸರ್ಕಾರ ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಾನು ವಿಧಾನಸಭೆಯಲ್ಲಿ ಗೆದ್ದು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದೇನೆ. ನನ್ನ ಸಹೋದರ ಎಂಪಿ ಆಕಾಂಕ್ಷಿ ಆಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲುಗೆ ಮತ್ತೆ ಎದುರಾಳಿ ಆಗ್ತಾರಾ ಎಂಬ ಪ್ರಶ್ನೆಗೆ ಮೇಲಿನಂತೆ ಸಚಿವ ನಾಗೇಂದ್ರ ಪ್ರತಿಕ್ರೀಯಿಸಿದರು.

ಕಾಂಗ್ರೆಸ್ಸಿನಲ್ಲಿ ಹಾಲಿ ಸಚಿವರಿಗೆ ಟಿಕೆಟ್ ನೀಡೋ ವಿಚಾರ ಮತ್ತೆ ಮುನ್ನೆಲೆಗೆ ಬಂದಿರೊ ವಿಚಾರವಾಗಿ ಮತನಾಡಿದ ಸಚಿವರು ಕೆಲವು ಸಂದರ್ಭದಲ್ಲಿ ಕೆಲವರಿಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು, ಸಚಿವರು ಬರಬೇಕಂತೇನಿಲ್ಲ. ಕಟ್ಟ ಕಡೆಯ ಕಾರ್ಯಕರ್ತ ನಿಂತರೂ ಗೆಲ್ಲೋ ಲಕ್ಷಣ ಈಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!