ಹೊಸದಿಗಂತ ವರದಿ, ಕಲಬುರಗಿ:
ವೀಕೆಂಡ್ ಕರ್ಫ್ಯೂನಲ್ಲಿಯೂ ಜನರು ನಗರದ ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೇ, ತರಕಾರಿ ಖರೀದಿಗೆ ಮುಗಿಬಿದ್ದಿರುವ ಸನ್ನಿವೇಶಗಳು ಶನಿವಾರ ಬೆಳಿಗ್ಗೆ ಕಂಡು ಬಂದಿದೆ.
ತರಕಾರಿ, ಹೂವು ಹಣ್ಣು ಖರೀದಿ ನೆಪದಲ್ಲಿ ಗುಂಪು ಗುಂಪಾಗಿ ಜನರು, ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟಿನಲ್ಲಿ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೊಡಗಿಕೊಂಡಿದ್ದರು.
ತರಕಾರಿ ಖರೀದಿ ಮಾಡಲು ಬಂದಂತಹ ಜನರಿಗೆ ಮಾಸ್ಕ್ ಧರಿಸುವಂತೆ ಕಣ್ಣಿ ಮಾರ್ಕೆಟ್, ಅಸೋಸಿಯೇಷನ್ ವತಿಯಿಂದ ಮೈಕ್ʼನಲ್ಲಿ ಅನೌನ್ಸ್ ಮಾಡುತ್ತಿದ್ದರು.
ವೀಕೆಂಡ್ ಕರ್ಫ್ಯೂಗೆ ಜನ ಕವಡೆ ಕಾಸಿನ ಕಿಮ್ಮತ್ತು ಕೊಡದೆ, ರಾಜಾರೋಷವಾಗಿ ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಸ್ಥಳದಲ್ಲಿ ಯಾವ ಪೊಲೀಸರಾಗಲಿ ಅಥವಾ ಪಾಲಿಕೆ ಆಧಿಕಾರಿಗಳಾಗಲಿ ಕಂಡು ಬರಲಿಲ್ಲ.