ಪಕ್ಷಕ್ಕಿಂತ ಯಾರೊಬ್ಬರು ದೊಡ್ಡವರಲ್ಲ, ಮಾನದಂಡಗಳನ್ನು ಅನುಸರಿಬೇಕು: ತರೂರ್ ಗೆ ಕಾಂಗ್ರೆಸ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲಿ ಪಕ್ಷಕ್ಕಿಂತ ಯಾರೊಬ್ಬರು ದೊಡ್ಡವರಲ್ಲ, ಸಮಿತಿ ನಿಗದಿ ಪಡಿಸಿರುವ ಮಾನದಂಡಗಳನ್ನು ಸಂಸದರೂ ಅನುಸರಿಸಬೇಕು ಎಂದು ಶಶಿ ತರೂರ್ ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕೆಪಿಸಿಸಿ ಮುಖ್ಯಸ್ಥರು ಮತ್ತು ವಿರೋಧ ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ನಾನು ಅವರನ್ನು ಬೆಂಬಲಿಸುತ್ತೇನೆ. ತರೂರ್ ಮಾತ್ರವಲ್ಲದೆ, ಎಲ್ಲ ಕಾಂಗ್ರೆಸ್ ನಾಯಕರು ಕೂಡ ಸಮಿತಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು.ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ತರೂರ್ ವಿರುದ್ಧ ಕೆಪಿಸಿಸಿ ಯಾವುದೇ ದೂರು ದಾಖಲಿಸಿದರೆ, ನಾವು ಮಧ್ಯಪ್ರವೇಶಿಸುತ್ತೇವೆ . ಈ ವಿಷಯದ ಬಗ್ಗೆ ತರೂರ್ ಅವರೊಂದಿಗೆ ತಾವು ಇನ್ನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಶಿ ತರೂರ್ ಉತ್ತರ ಕೇರಳ ಪ್ರವಾಸವನ್ನು ಪ್ರಾರಂಭಿಸಿದ ನಂತರ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!