ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ರವೀಂದ್ರ ಜಡೇಜಾ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ವರದಿಯ ಪ್ರಕಾರ, ಗಾಯದಿಂದಾಗಿ ವಿರಾಮದಲ್ಲಿರುವ ಜಡೇಜಾ, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಹಾಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಅಂದ್ಹಾಗೆ, ಜಡೇಜಾ ಮೊಣಕಾಲಿನ ಗಾಯದಿಂದಾಗಿ ಹೊರಗುಳಿದಿದ್ದು, ಸೆಪ್ಟೆಂಬರ್’ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜಡೇಜಾ ಬದಲಿಗೆ ಶಹಬಾಜ್ ಅಹ್ಮದ್ಗೆ ಅವಕಾಶ ನೀಡಬಹುದು. ಆದಾಗ್ಯೂ, ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಬಿಸಿಸಿಐ ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!