ಹೊಸದಿಗಂತ ವರದಿ, ವಿಜಯನಗರ:
ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಜಲಾಶಯಗಳ ಕ್ರಸ್ಟ್ ಗೇಟ್ ಬದಲಿಸಬೇಕು. ಆದರೆ, ಜಲಾಶಯ ನಿರ್ಮಾಣಗೊಂಡು ೭೦ ವರ್ಷ ಕಳೆದಿದ್ದರಿಂದ ಯಾರ ಮೇಲೂ ಗೂಭೆ ಕೂರಿಸಲ್ಲ. ಇನ್ಮುಂದೆ ತಜ್ಞರ ಸಲಹೆಯಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ನೀರಿನ ರಬಸಕ್ಕೆ ೧೯ ನೇ ಗೇಟ್ ಕೊಚ್ಚಿ ಹೋಗಿದ್ದರಿಂದ ಮಂಗಳವಾರ ಜಲಾಶಯಕ್ಕೆ ಭೆಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ೭೦ ವರ್ಷಗಳು ಕಳೆದಿದೆ. ಡ್ಯಾಂ ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಸ್ಟ್ ಗೇಟ್ ಕಳಚಿ ಬಿದ್ದಿದೆ. ತುಂಗಭದ್ರ ಜಲಾಶಯದ ಅಚ್ವು ಕಟ್ಟು ಪ್ರದೇಶದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಡ್ಯಾಂ ತುಂಬಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಡ್ಯಾಂ ಎಕ್ಸಪರ್ಟ್ ಕನ್ನಯ್ಯ ನಾಯುಡು ಮಾರ್ಗದರ್ಶನದಲ್ಲಿ ಸ್ಟಾಪ್ಲರ್ ಗೇಟ್ ನಿರ್ಮಿಸಲಾಗುತ್ತಿದ್ದು, ನಾಳೆಯಿಂದ ಅಳವಡಿಸಲಾಗುತ್ತದೆ.
ಈ ಬಾರಿ ಮಾನ್ಸೂನ್ ನಲ್ಲಿ ದೊಡ್ಡ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯ ಮುನ್ಸೂಚನೆ ಇರುವುದರಿಂದ ಮತ್ತೆ ಜಲಾಶಯ ಭರ್ತಿಯಾಗುವ ವಿಶ್ವಾಸವಿದೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ. ಜಲಾಶಯ ಭರ್ತಿಯಾದ ಮೇಲೆ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಹಣಕಾಸು ಸಚಿವ ಪಿ.ಕೇಶವ್, ಸಚಿವರಾದ ಜಮೀರ್ ಅಹ್ಮದ್, ಬೋಸರಾಜು, ಶಿವರಾಜ್ ತಂಗಡಗಿ, ಶಾಸಕರಾದ ಹೆಚ್.ಆರ್.ಗವಿಯಪ್ಪ, ಅಜೇಯಸಿಂಗ್, ಡಾ.ಶ್ರೀನಿವಾಸ, ಲತಾ ಮಲ್ಲಿಕಾರ್ಜುನ, ಜೆ.ಎನ್.ಗಣೇಶ್, ಕೃಷ್ಣಾನಾಯ್ಕ್ ,ರಾಯದುರ್ಗ ಶಾಸಕ ಶ್ರೀನಿವಾಸ, ಸ್ಥಳೀಯ ಶಾಸಕ ಬಿ.ಎಂ.ನಾಗರಾಜ್, ಸಂಸದ ಈ ತುಕಾರಾಂ, ರಾಜಶೇಖರ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಹಂಪನಗೌಡ ಬಾದರ್ಲಿ, ಮಾಜಿ.ಸಂಸದ ಕರಡಿ ಸಂಗಣ್ಣ , ಭೀಮಾನಾಯ್ಕ, ಬುಡಾ ಅಧ್ಯಕ್ಷ ಆಂಜನೇಯಲು, ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಅಭಿಯಂತರರು ಇದ್ದರು.