ಯಾರಿಗೂ ಭಯ ಬೇಡ ಈ ನಿಗೂಢ ರಣಹದ್ದು ಮಹಾರಾಷ್ಟ್ರ ಅರಣ್ಯ ಇಲಾಖೆಯದ್ದು!

ಹೊಸದಿಗಂತ ವರದಿ, ಕಾರವಾರ:

ನಗರದ ಕೋಡಿಭಾಗ ನದಿವಾಡದಲ್ಲಿ ಕಾಲಿನಲ್ಲಿ ಟ್ಯಾಗ್ ಮತ್ತು ಬೆನ್ನಮೇಲೆ ಚಿಕ್ಕ ಯಂತ್ರವನ್ನು ಅಳವಡಿಸಿದ ಹದ್ದು ಪತ್ತೆಯಾಗಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದು ಈಗ ಇದರ ರಹಸ್ಯ ಬಯಲಾಗಿದೆ.

ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿ ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ನಿವಾರಿಸಿದ್ದಾರೆ.

ಭಾನುವಾರ ಮಧ್ಯಾಹ್ನ ವೇಳೆಗೆ ನಗರದ ಕೋಡಿಭಾಗದ ನದಿವಾಡದಲ್ಲಿ ಜನವಸತಿ ಪ್ರದೇಶದ ಮನೆಯೊಂದರ ಮೇಲೆ ಬಂದು ಕುಳಿತ ಹದ್ದು ಪಕ್ಷಿಯ ಒಂದು ಕಾಲಿನಲ್ಲಿ ನೀಲಿ ಬಣ್ಣ ರಿಂಗ್ ಇನ್ನೊಂದು ಕಾಲಿನಲ್ಲಿ ಹಸಿರು ಬಣ್ಣ ರಿಂಗ್ ಇದ್ದು ಅದರ ಮೇಲೆ ಅಕ್ಷರ ಬರೆದಿದ್ದು ಕಂಡು ಬಂದಿತ್ತು. ಅಲ್ಲದೆ ಇದರ ಬೆನ್ನ ಹಿಂದೆ ಕ್ಯಾಮರಾ ದಂತ ಚಿಕ್ಕ ಯಂತ್ರ ಅಳವಡಿಸಲಾಗಿತ್ತು.

ಈ ಹಿನ್ನಲೆ ಸ್ಥಳಕ್ಕೆ ದೌಡಾಯಿಸಿದ ಕಾರವಾರ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ಪರಿಶೀಲನೆ ನಡೆಸಿದ್ದರು. ಕ್ಯಾಮೆರಾದಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿ ಕಾಲಿನ ಮೇಲಿರುವ ಟ್ಯಾಗ್ ಕುರಿತು ಮಾಹಿತಿ ಕಲೆಹಾಕಿದ್ದು, ಈ ವೇಳೆ ಮಹಾರಾಷ್ಟ್ರ ಅರಣ್ಯ ಇಲಾಖೆ ಎಂದು ಬರೆದಿರುವುದು ಪತ್ತೆಯಾಗಿತ್ತು. ರಣಹದ್ದಿನ ಅಧ್ಯಯನದ ದೃಷ್ಟಿಯಿಂದ ಮಹಾರಾಷ್ಟ್ರ ಅರಣ್ಯ ಟ್ಯಾಗ್‌ ಅಳವಡಿಸಿದ್ದಾಗಿ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ಹಾರಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!