ವಿಶೇಷ ಚೇತನ ಸಹೋದರಿಯರಿಗೆ ವ್ಯವಸ್ಥೆ ಮಾಡುವ ವರೆಗೆ ಭಾಷಣ ಮಾಡಲ್ಲ: ಪ್ರಧಾನಿ ಮೋದಿ ನಡೆಗೆ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತೆಲಂಗಾಣದ ಮೆಹಬೂಬನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮೋದಿ ಮತ್ತೆ ಎಲ್ಲರ ಹೃದಯ ಗೆದ್ದಿದ್ದಾರೆ. ಭಾಷಣ ಮಾಡುತ್ತಿದ್ದ ವೇಳೆ ಸಮಾವೇಶದಲ್ಲಿ ಹಾಜರಾಗಿದ್ದ ವಿಶೇಷ ಚೇತನ ಸಹೋದರಿಯರತ್ತ ನೆಟ್ಟಿದೆ. ಹಿಂಭಾಗದಲ್ಲಿ ಪ್ರಯಾಸಪಡುತಿದ್ದ ವಿಶೇಷ ಚೇತನ ಸಹೋದರಿಯರಿಗೆ ದಾರಿ ಬಿಡಿ, ಅವರಿಗೆ ಮುಂಭಾಗದಲ್ಲಿ ವ್ಯವಸ್ಥೆ ಮಾಡಿ. ಅವರಿಗೆ ವ್ಯವಸ್ಥೆ ಮಾಡುವ ವರೆಗೆ ಭಾಷಣ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ವಿಶೇಷ ಚೇತನ ಸಹೋದರಿಯರು ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡಿ. ಮುಂದೆ ನಿಂತಿರುವ ಪ್ರೀತಿಯ ಜನಗಳೇ ಅವರಿಗೆ ದಾರಿ ಬಿಡಿ. ವಿಶೇಷ ಚೇತನರು ಹಲವು ಗಂಟೆಗಳಿಂದ ಪ್ರಯಾಸ ಪಡುತ್ತಿದ್ದರೆ. ಅವರ ನೋವು ನೋಡಲು ಸಾಧ್ಯವಿಲ್ಲ. ಅವರಿಗೆ ಸಭೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ. ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸುವವರಗೆ ನಾನು ಭಾಷಣ ಮುಂದುವರಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿ ಈ ಮಾತುಗು ಹೇಳುತ್ತಿದ್ದಂತೆ ಹಿಂಭಾಗದಲ್ಲಿದ್ದ ವಿಶೇಷ ಚೇತನ ಯುವತಿಯರನ್ನು ಸಿಬ್ಬಂದಿಗಳು ಮುಂಭಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿದ್ದರೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮೋದಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಮೋದಿ ಭಾರತದ ಅವತಾರ ಪುರುಷ ಎಂದು ಬಣ್ಣಿಸಿದ್ದಾರೆ. ಮೋದಿ ಜನ ನಾಯಕ, ಜನರ ಪ್ರಧಾನಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!