ಬಿಗ್​ಬಾಸ್​ ಖ್ಯಾತಿಯ ಛೋಟಾ ಭಾಯಿಜಾನ್ ಗೆ ಮದುವೆ ಅಂತೆ: ಖುಷಿ ಹಂಚಿಕೊಂಡ ಅಬ್ದು ರೋಜಿಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಬ್ದು ರೋಜಿಕ್ ಹೆಸರು ಎಲ್ಲರಿಗೂ ಚಿರಪರಿಚಿತ. ‘ಬಿಗ್ ಬಾಸ್’ ಮೂಲಕ ಖ್ಯಾತಿ ಪಡೆದ ಜಗತ್ತಿನ ಅತಿ ಕುಳ್ಳ ಗಾಯಕ ಛೋಟಾ ಭಾಯಿಜಾನ್. ಕೋಟ್ಯಧಿಪತಿಯೂ ಆಗಿರುವ ತಜಿಕಿಸ್ತಾನ್​ ದೇಶದ ಈ ಗಾಯಕ, ಹಿಂದಿ ಬಿಗ್ ಬಾಸ್​ನಲ್ಲಿ ಸಖತ್ ಸುದ್ದಿ ಆಗಿದ್ದರು.

ಬಳಿಕ ನಟ ಸಲ್ಮಾನ್ ಖಾನ್ ಜೊತೆಗೂ ಉತ್ತಮ ಒಡನಾಟ ಹೊಂದಿದ್ದು, ಬಾಲಿವುಡ್ ಅಂಗಳದಲ್ಲಿ ಎಲ್ಲರ ಫೇವರಿಟ್ .
ಇದೀಗ ಅಬ್ದು ಸುದ್ದಿಯಲ್ಲಿರೋದು ಮದುವೆಯಿಂದಾಗಿ.

ಹೌದು. 19 ವರ್ಷದ ಯುವತಿಯನ್ನು ಇವರು ವಿವಾಹವಾಗಲಿದ್ದು, ಈ ಬಗ್ಗೆ ಖುದ್ದು ಸೋಷಿಯಲ್​ ಮೀಡಿಯಾದಲ್ಲಿ ಅವರು ಶೇರ್​ ಮಾಡಿಕೊಂಡಿದ್ದಾರೆ. ನೋಡಲು ಚಿಕ್ಕ ಹುಡುಗನಂತೆ ಕಾಣುವ 20 ವರ್ಷದ ಅಬ್ದು ಅವರ ಮದುವೆಯ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ತಜಿಕಿಸ್ತಾನ್​ ದೇಶದ ಗಾಯಕ. ಸಾಕಷ್ಟು ಜನಪ್ರಿಯತೆ ಪಡೆದಿರುವ ಕೋಟ್ಯಧಿಪತಿ. ಇವರು ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಕೂಡ ಹೌದು. ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 8 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಎಂಗೇಜ್​ಮೆಂಟ್​ ಉಂಗುರ ಹಿಡಿದುಕೊಂಡು ಮದುವೆಯ ಸುದ್ದಿಯನ್ನು ಹೇಳಿಕೊಂಡಿದ್ದಾರೆ.

‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಿಕ್.

‘ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್​ಪ್ರೈಸ್​ ಇದೆ’ ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ. ಇದೀಗ ಅಬ್ದು ರೋಜಿಕ್ ಮದುವೆ ಆಗುತ್ತಿರುವ ವಿಚಾರ ಹೊರ ಬಿದ್ದಿದ್ದು, ಅಬ್ದು ಕೈ ಹಿಡಿಯುವ ಲಕ್ಕಿ ಹುಡುಗಿ ಯಾರು ಎನ್ನುವ ಕುತೂಹಲ ಎಲ್ಲರಿಗಿದೆ. ಜುಲೈ 7ರ ದಿನಾಂಕವನ್ನು ಸೇವ್‌ ಮಾಡಿಕೊಳ್ಳಿ ಎಂದಿದ್ದಾರೆ ಅಬ್ದು ರೋಜಿಕ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!