ಹಿಮಾಚಲದಲ್ಲಿ ಪ್ರವಾಸಿಗರು ಯಾವುದೇ ತೊಂದರೆ ಎದುರಿಸಬಾರದು: ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಿಎಂ ಸುಖು ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನಿರ್ದೇಶನ ನೀಡಿದ್ದಾರೆ. ಮನಾಲಿಯಲ್ಲಿ ಜನವರಿ 2, 2023 ರಿಂದ ಜನವರಿ 7 ರವರೆಗೆ ಪ್ರವಾಸಿ ತಾಣಗಳಲ್ಲಿ 24 ಗಂಟೆಗಳ ಕಾಲ ಡಾಬಾಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಈಟಿಂಗ್ ಜಾಯಿಂಟ್‌ಗಳನ್ನು ತೆರೆಯಲು ಸರ್ಕಾರ ನಿರ್ದೇಶಿಸಿದೆ.

ಶಿಮ್ಲಾ, ಮನಾಲಿ, ಕಸೌಲಿ ಮತ್ತು ಧರ್ಮಶಾಲಾ ಮುಂತಾದ ಪ್ರವಾಸಿ ತಾಣಗಳಲ್ಲಿ ಜನವರಿ 2 ರವರೆಗೆ ಮತ್ತು ವಿಶೇಷವಾಗಿ ಮನಾಲಿಯಲ್ಲಿ ಚಳಿಗಾಲದ ಕಾರ್ನೀವಲ್ ಇರುತ್ತದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸಹಜವಾಗಿದ್ದು, ಶೀಘ್ರವೇ ಲಸಿಕೆ ಕೊರತೆ ನೀಗಲಿದೆ ಎಂದು ಹೇಳಿದರು.

“ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿಯ ಕುರಿತು ನಾನು ಸಭೆ ನಡೆಸುತ್ತಿದ್ದೇನೆ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ಇಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ, ಲಸಿಕೆ ಕೊರತೆಯಿದ್ದು, ಅದನ್ನು ನಿರ್ವಹಿಸುತ್ತೇವೆ, ನಾನು NITI AAYOG ಜೊತೆಗೆ ಮಾತನಾಡಿದ್ದೇನೆ” ಎಂದು ಮುಖ್ಯಮಂತ್ರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!