ವ್ಯಾಟಿಕನ್: ನಿವೃತ್ತ ಪೋಪ್ 16ನೇ ಬೆನೆಡಿಕ್ಟ್ ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದಿನ ಪೋಪ್ 16ನೇ ಎಮೆರಿಟಸ್ ಬೆನೆಡಿಕ್ಟ್ ಅವರ ಆರೋಗ್ಯವು ಗಂಭೀರವಾಗಿ ಹದಗೆಟ್ಟಿದೆ ಎಂದು ವ್ಯಾಟಿಕನ್‌ ವಕ್ತಾರರು ತಿಳಿಸಿದ್ದಾರೆ.
ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಪೋಪ್ ಫ್ರಾನ್ಸಿಸ್‌ ಬುಧವಾರ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಲೆ ಬೆನೆಡಿಕ್ಟ್‌ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಸಲ್ಲಿಸುವಂತೆ ಅನುಯಾಯಿಗಳನ್ನುಕೋರಿದ್ದಾರೆ.
95 ವರ್ಷದ ಪೋಪ್ ಬೆನೆಡಿಕ್ಟ್ ಅವರು 600 ವರ್ಷಗಳ ಇತಹಾಸದಲ್ಲಿ ರಾಜೀನಾಮೆ ಸಲ್ಲಿಸಿದ ಮೊದಲ ಪೋಪ್‌ ಆಗಿದ್ದಾರೆ. ಫೆಬ್ರವರಿ 2013 ರಲ್ಲಿ ಅವರು ನಿವೃತ್ತಿ ಘೋಷಿಸಿದ್ದರು. ರೋಮನ್ ಕ್ಯಾಥೋಲಿಕ್ ಚರ್ಚ್ ವಿಶ್ವಾದ್ಯಂತ ಸುಮಾರು 1.3 ಬಿಲಿಯನ್ ಸದಸ್ಯರನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!