ಭಾರತ-ಪಾಕಿಸ್ತಾನ್ ‘ಮೆಗಾ’ ಮ್ಯಾಚ್: ಆಸ್ಪತ್ರೆಗಳಲ್ಲಿ ಬೆಡ್‌ ಬುಕ್‌ ಮಾಡಿಕೊಂಡ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಸಿಸಿ ಏಕದಿನ ವಿಶ್ವಕಪ್ 2023ರ ಪಂದ್ಯದಲ್ಲಿ ಬಹುಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಶನಿವಾರ (ಅಕ್ಟೋಬರ್ 14) ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇದೀಗ ಈ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಆಸ್ಪತ್ರೆಗಳ ಬೆಡ್‌ಗಳನ್ನೇ ಬುಕ್‌ ಮಾಡಿಕೊಂಡಿದ್ದಾರೆ.

ಮೆಗಾ ಪಂದ್ಯಕ್ಕಾಗಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಕೇಂದ್ರ ಸರ್ಕಾರವೂ ಘೋಷಿಸಿದೆ. ಪಂದ್ಯಕ್ಕೆ ಒಂದೇ ದಿನ ಬಾಕಿ ಇದ್ದು,  ಅನೇಕ ಅಭಿಮಾನಿಗಳು ಇಂದು ಅಹಮದಾಬಾದ್ ತಲುಪುತ್ತಿದ್ದಾರೆ. ಹೈವೋಲ್ಟೇಜ್‌ ಪಂದ್ಯ ಆದ ಕಾರಣ ಈ ಪಂದ್ಯ ವೀಕ್ಷಿಸಲು ಹೊರಗಿನಿಂದ ಬರುವ ಅಭಿಮಾನಿಗಳು ಉಳಿದುಕೊಳ್ಳಲು ಹೋಟೆಲ್‌ಗಳನ್ನು ಬುಕ್ ಮಾಡಿದ್ದಾರೆ. ಎಲ್ಲಾ ಹೊಟೇಲ್‌ಗಳು ಈಗಾಗಲೇ ಬುಕ್‌ ಆಗಿದ್ದು, ಹೋಟೆಲ್ ಕೊಠಡಿಗಳು ಸಿಗದವರು ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸುತ್ತಿದ್ದಾರೆ.

ಎಲ್ಲಾ ಹೋಟೆಲ್ ರೂಮ್‌ಗಳು ಈಗಾಗಲೇ ಬುಕ್ ಆಗಿದ್ದು, ಬೆಲೆ 20 ಪಟ್ಟು ಹೆಚ್ಚಾಗಿದೆ. ಪಂದ್ಯವನ್ನು ವೀಕ್ಷಿಸಲು ನಿರ್ಧರಿಸಿರುವ ಅಭಿಮಾನಿಗಳು ಆರೋಗ್ಯ ತಪಾಸಣೆಯ ಪ್ಯಾಕೇಜ್‌ಗಳೊಂದಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುತ್ತಿದ್ದಾರೆ.

ಮೆಗಾ ಮ್ಯಾಚ್ ನೋಡಲು ಅಭಿಮಾನಿಗಳು ಎಷ್ಟು ಕಾತುರರಾಗಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಆದರೆ ಅಹಮದಾಬಾದ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಮಾತ್ರ ರೋಗಿಗಳಿಗೆ ಹೊರತುಪಡಿಸಿ ಅಭಿಮಾನಿಗಳಿಗೆ ಅವಕಾಶ ಕಲ್ಪಿಸದಂತೆ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!