ಭ್ರಷ್ಟಾಚಾರದ ಅರೋಪ: ನೋಬೆಲ್‌ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿಗೆ 5 ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮ್ಯಾನ್ಮಾರ್‌ ನ ಉಚ್ಛಾಟಿತ ನಾಗರೀಕ ನಾಯಕಿ ಮತ್ತು ನೋಬೆಲ್‌ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಅವರ ಮೇಲೆ ಭ್ರಷ್ಟಾಚಾರದ ಆರೋಪದ ಮೇಲೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ವರದಿಯಾಗಿದೆ.

ಸೂಕಿಯವರು 600,000 ನಗದು ಮತ್ತು ಚಿನ್ನದಗಟ್ಟಿಗಳನ್ನು ಲಂಚದ ರೂಪದಲ್ಲಿ ಸ್ವೀಕರಿಸಿದ್ದಾರೆ ಎಂದು ಮ್ಯಾನ್ಮಾರ್‌ ನ ಜುಂಟಾ ಕೋರ್ಟ್‌ ಆರೋಪಿಸಿದೆ. 76 ವರ್ಷದ ಸೂಕಿ ಅವರ ಮೇಲಿನ 11 ಭ್ರಷ್ಟಾಚಾರದ ಪ್ರಕರಣಗಳ ಪೈಕಿ ಇದು ಮೊಲನೇಯದಾಗಿದ್ದು ಅವರ ಉಳಿದ ಪ್ರಕರಣಗಳಲ್ಲಿ ಒಂದೊಂದೂ ಕನಿಷ್ಟ 15 ವರ್ಷಶಿಕ್ಷೆ ನೀಡುವಂಥದ್ದು ಎಂದು ಸುದ್ದಿ ಮೂಲಗಳು ತಿಳಿಸಿದ್ದು ಅವರ ಪ್ರಕರಣಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ನಡೆಸುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸುದ್ದಿ ಮೂಲಗಳು ನಿರಾಕರಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!