ಮೂವತ್ತು ವರ್ಷಗಳಿಂದ ಟಾಯ್ಲೆಟ್‌ನಲ್ಲಿ ಸಮೋಸಾ ತಯಾರಿ: ರೆಸ್ಟೋರೆಂಟ್‌ಗೆ ಬೀಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌದಿ ಅರೇಬಿಯಾದಲ್ಲಿರುವ ರೆಸ್ಟೋರೆಂಟ್‌ನ ಅಸಲಿ ಸತ್ಯ ಹೊರಬದ್ದಿದೆ. ಈ ರೆಸ್ಟೋರೆಂಟ್‌ನಲ್ಲಿ 30 ವರ್ಷಗಳಿಂದ ಶೌಚಾಲಯದಲ್ಲಿ ಸಮೋಸ ತಯಾರಿ ನಡೆಯುತ್ತಿದೆ. ವಾಶ್ ರೂಂನಲ್ಲಿ ಊಟ ಬಡಿಸಲಾಗುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಕನಿಷ್ಠ ಸ್ವಚ್ಛತೆಯನ್ನೂ ಪಾಲಿಸದಿರುವ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಬಂದಿದ್ದವು. ಆದರೂ ಈ ರೆಸ್ಟೋರೆಂಟ್ ಶೈಲಿ ಬದಲಾಗಿಲ್ಲ. ಪ್ರಸ್ತುತ ಶೌಚಾಲಯದಲ್ಲಿ ಸಮೋಸ ತಯಾರಿಸಿದ್ದಕ್ಕೆ ರೆಸ್ಟೋರೆಂಟ್‌ಗೆ ಸೀಲ್‌ ಹಾಕಲಾಗಿದೆ.

ಆಹಾರ ತಯಾರಿಕೆಗೆ, ಉತ್ತಮ ಗುಣಮಟ್ಟದ ಆಹಾರ ಪಾದರ್ಥಗಳನ್ನು ಬಳಸುತ್ತಿಲ್ಲ ಎಂದು ಅಲ್ಲಿನ ಗ್ರಾಹಕರು ಆರೋಪ ಮಾಡಿದ್ದಾರೆ. ಕೆಲವೊಮ್ಮೆ ಆರ್ಡರ್‌ ಮಾಡಿದ ಊಟದಲ್ಲಿ ಬೂಸ್ಟ್‌, ಜಿರಲೆ ಹಾಗೂ ಹಲ್ಲಿಯ ಅವಶೇಷಗಳು ಸಿಕ್ಕಿವೆ ಎಂದು ದೂರಿದ್ದಾರೆ.

ಗ್ರಾಹಕರ ದೂರಿನ ಮೇರೆಗೆ ಅಧಿಕಾರಿಗಳು ರೆಸ್ಟೋರೆಂಟ್ ನಲ್ಲಿ ತಪಾಸಣೆ ನಡೆಸಿದಾಗ ಇಲಿ, ಜಿರಳೆ, ಹುಳುಗಳು ಕಂಡುಬಂದಿವೆ. ಆಹಾರವನ್ನು ತಯಾರಿಸುವ ಕೋಣೆಯ ಸುತ್ತಲೂ ಕೆಲಸಗಾರರ ಅನೈತಿಕ ಚಟುವಟಿಕೆಗಳನ್ನು ಕಂಡ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಹೋಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ರೆಸ್ಟೋರೆಂಟ್‌ಗೆ ಸೀಲ್‌ ಹಾಕಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!