ಹೊಸದಿಗಂತ ವರದಿ,ಕಲಬುರಗಿ:
ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಯಾರಿಂದಲೂ ಸಹ ರಾಷ್ಟ್ರ ಭಕ್ತ ಸಂಘಟನೆಯಾದ ಆರ್.ಎಸ್.ಎಸ್.ನ್ನು ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ಅವರು ಪಕ್ಷದ ವತಿಯಿಂದ ಆಯೋಜಿಸಿದ್ದ ಹಿಂದೂಳಿದ ವಗ೯ಗಳ ರಾಜ್ಯ ಮಟ್ಟದ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ 62% ಹಿಂದುಳಿದ ವರ್ಗಗಳ ಜನರು ಇದ್ದಾರೆ. 70 ವರ್ಷ ಆಡಳಿತ ಮಾಡಿ ಹಿಂದೂಳಿದ ವಗ೯ಗಳಿಗೆ ಮಾಡಿದ ಸಾಧನೆ ಶೂನ್ಯ ಇದೆ.
ದೇಶದಲ್ಲಿ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದರು.ತಳವಾರ , ಪರಿವಾರ, ದಲಿತರು , ಕುರುಬರು , ಸೇರಿ ಹಿಂದುಳಿದ ವರ್ಗದವರು ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದಿರಿ ಎಂದು ಹೇಳಿದರು.
ಕರೊನಾ ಸಂಧರ್ಬದಲ್ಲಿ ಜನರು ಉಪವಾಸ ಇರಬಾರದು ಎಂದು ನರೇಂದ್ರ ಮೋದಿ ಅವರು ಜಾಬ್ ಕಾರ್ಡ್ ಕೊಟ್ಟು ಉದ್ಯೋಗ ಹಾಗೂ ಎರಡು ವರ್ಷ ಉಚಿತ ರೇಷನ್ ಕೊಟ್ಟಿದ್ದಾರೆ ಎಂದ ಅವರು, ಕಾಂಗ್ರೆಸ್ ನವರು ಹಾಗೂ ಸಿದ್ದರಾಮಯ್ಯ ದಿನಾ ಬೆಳಗ್ಗೆ ಎದ್ದರೆ ಮೋದಿಯನ್ನು ಬೈಯುತ್ತಾರೆ ಎಂದು ಹೇಳಿದರು.
ಕನಾ೯ಟಕದ ಜನ ಕಾಯ್ತಾ ಇದ್ದಾರೆ , ಇವರನ್ನು ಗುಂಡಿಯಲ್ಲಿ ಮಣ್ಣು ಹಾಕಿ ಮುಚ್ಚುವುದಕ್ಕೆ ಎಂದ ಅವರು, 2023 ರಲ್ಲಿ ಕಾಂಗ್ರೆಸ್ ನ ಮುಚ್ಚಿ ಹಾಕಿ 150 ಸೀಟ್ ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ನರೇಂದ್ರ ಮೋದಿಯ ಅವರ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ 27 ಜನ ಹಿಂದುಳಿದ ವರ್ಗದರಿಗೆ ಸ್ಥಾನ ಕೊಟ್ಟಿದ್ದಾರೆ. ಕಾಂಗ್ರೆಸ್ ನ ಸಿದ್ದರಾಮಯ್ಯ , ಡಿಕೆಶಿ ಅವರು ಎಷ್ಟು ಜನರಿಗೆ ಸ್ಥಾನ ಕೊಟ್ಟಿದ್ದಾರೆ ಎಂದು ಉತ್ತರಿಸಲಿ ಎಂದರು.
ದೇಶ ಭಕ್ತ ಸಂಘಟನೆಯಾದ ಆರ್. ಎಸ್. ಎಸ್. ಮುಗಿಸ್ತೆನೆ ಸಿದ್ದರಾಮಯ್ಯ ಹೇಳುತ್ತಾರೆ.ಆದರೆ ಆರ್ ಎಸ್ ಎಸ್ ಎಂಬ. ಮೂರು ಪದದ ತಂಟೆಗೆ ಬಂದರೆ, ಮುಂದಿನ ಚುನಾವಣೆಯಲ್ಲಿ ಹೇಳೂ ಹೆಸರಿಲ್ಲದ ಹಾಗೆ ಸವ೯ನಾಶವಾಗಿ ಹೋಗುತ್ತಿರಾ ಎಂದು ಕಿಡಿಕಾರಿದರು.