Thursday, July 7, 2022

Latest Posts

ಶಬ್ದಮಾಲಿನ್ಯ: ನಾನಾ ಧಾರ್ಮಿಕ ಕೇಂದ್ರಗಳಿಗೆ ಮತ್ತೆ ಪೊಲೀಸ್ ನೋಟಿಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದ್ವನಿವರ್ಧಕ ವಿಚಾರ ಸಂಬಂಧ ಹೈಕೋರ್ಟ್ ಆದೇಶ ಉಲ್ಲಂಘಿಸಿದ ಹಿನ್ನೆಲೆ ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಾರ್ಥನಾ ಮಸೀದಿಗಳು, ಚರ್ಚ್ ಮತ್ತು ಮಂದಿರಗಳಿಗೆ ನೋಟಿಸ್ ನೀಡಲಾಗಿದ್ದು, ಕಳೆದ 15 ದಿನಗಳ ನೋಟಿಸ್ ನೀಡಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಈವರೆಗೆ ಒಟ್ಟು 318 ಮಸೀದಿ, 98 ಚರ್ಚ್​ಗಳಿಗೆ ನೋಟಿಸ್​​​​​​​ ನೀಡಲಾಗಿದೆ. ಒಟ್ಟು 396 ಮಂದಿರಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.ಜೊತೆಗೆ 34 ರೆಸ್ಟೋರೆಂಟ್‌ಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ.
ಇನ್ನು ಹೈಕೋರ್ಟ್ ಆದೇಶ ಉಲ್ಲಂಘಿಸೋ ವಿರುದ್ಧ FIR ಹಾಕುವಂತೆಯೂ ಹಿರಿಯ ಪೊಲೀಸ್​ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನೋಟಿಸ್ ಬಳಿಕವೂ ನಿಯಮ ಪಾಲಿಸದಿದ್ದರೆ ಆ ಕ್ರಮದ ಬಗ್ಗೆ ಪೊಲೀಸರು ಹೈಕೋರ್ಟ್​ಗೆ ಮಾಹಿತಿ ನೀಡಲಿದ್ದಾರೆ.

ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

ಮಸೀದಿಗಳು: ಹಿಂದೆ – 125, ಈಗ – 193 , ಒಟ್ಟು – 318

ಮಂದಿರಗಳು: ಹಿಂದೆ – 83, ಈಗ – 313, ಒಟ್ಟು – 396

ಚರ್ಚ್ ಗಳು:ಹಿಂದೆ – 22, ಈಗ – 76, ಒಟ್ಟು – 98

ರೆಸ್ಟೋರೆಂಟ್ : 34, ಇತರೆ – 74

ನೋಟಿಸ್ ಕೊಟ್ಟು ಶಬ್ಧ ಮಾಲಿನ್ಯ ನಿಯಮ ಪಾಲಿಸದ ಪ್ರಾರ್ಥನಾ ಮಂದಿರಗಳ ಮೇಲೆ ಪೋಲಿಸರು ನಿಗಾ ಇಟ್ಟಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಪ್ರಾರ್ಥನಾ ಮಂದಿರಗಳಿಗೆ ಪೊಲೀಸರು ವಿಸಿಟ್ ಹಾಕ್ತಿದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss