ಜಾಕ್ವೆಲಿನ್ ಕಂಡರೆ ನೋರಾ ಫತೇಹಿಗೆ ಯಾವಾಗಲೂ ಅಸೂಯೆ: ವಂಚಕ ಸುಖೇಶ್ ಚಂದ್ರಶೇಖರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

200 ಕೋಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರ್ಥಿಕ ಅಪರಾಧ ವಿಭಾಗಗಳು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಆರೋಪಿ ಸುಕೇಶ್ ಚಂದ್ರಶೇಖರ್ ಅನೇಕ ಸಂಗತಿ ಹೊರ ಹಾಕಿದ್ದಾನೆ.

ಸುಕೇಶ್ ತನ್ನ ವಕೀಲರಾದ ಅನಂತ್ ಮಲಿಕ್ ಮತ್ತು ಎಕೆ ಸಿಂಗ್ ಮೂಲಕ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಬಾಲಿವುಡ್ ನಟಿ ನೋರಾ ಫತೇಹಿಗೆ ಯಾವಾಗಲೂ ಅಸೂಯೆಯಿತ್ತು ಎಂದು ಹೇಳಿದ್ದಾನೆ.

ನೋರಾ ಫತೇಹಿ ಯಾವಾಗಲೂ ಜಾಕ್ವೆಲಿನ್ ವಿರುದ್ಧ ಬ್ರೈನ್ ವಾಶ್ ಮಾಡುತ್ತಿದ್ದಳು. ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನ್ನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಳು, ಕರೆಗೆ ಉತ್ತರಿಸದಿದ್ದರೂ ಕರೆ ಮಾಡುತ್ತಲೇ ಇದ್ದಳು ಎಂದು ಸುಕೇಶ್ ಹೇಳಿಕೊಂಡಿದ್ದಾನೆ.

ತಾನು ಜಾಕ್ವೆಲಿನ್ ಜೊತೆಗೆ ಸಂಬಂಧದಲ್ಲಿದ್ದಾಗ, ನೋರಾಳನ್ನು ತಪ್ಪಿಸಲು ಪ್ರಾರಂಭಿಸಿದೆ ಆದರೆ ಆಕೆ ಕರೆ ಮಾಡುವ ಮೂಲಕ ನನ್ನನ್ನು ಕೆರಳಿಸುತ್ತಿದ್ದಳು ಮತ್ತು ಸಂಗೀತ ನಿರ್ಮಾಣ ಕಂಪನಿ ಸ್ಥಾಪಿಸಲು ಬಾಬಿಗೆ (ನೋರಾ ಸಂಬಂಧಿ) ಸಹಾಯ ಮಾಡುವಂತೆ ಕೇಳಿಕೊಂಡಿದ್ದರಿಂದ ಅದನ್ನು ಮಾಡಿದ್ದೇನೆ ಎಂದಿದ್ದಾನೆ.

ಅಷ್ಟೇ ಅಲ್ಲದೆ ಆಕೆ ಬಯಸಿದ ಹರ್ಮ್ಸ್ ಬ್ಯಾಗ್ಗಳು ಮತ್ತು ಆಭರಣಗಳ ಅನೇಕ ಚಿತ್ರಗಳನ್ನು ಅವಳಿಗೆ ನೀಡಿದ್ದೇನೆ. ಈ ಬ್ಯಾಗ್ಗಳು 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಸುಕೇಶ್ ತಿಳಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!