May 16, 2026
Saturday, May 16, 2026
spot_img

ಪಲ್ಯ, ಗ್ರೇವಿ & More 88 | ಉತ್ತರ ಕರ್ನಾಟಕ ಶೈಲಿಯ ಸಾಂಪ್ರದಾಯಿಕ ಪುಂಡಿ ಪಲ್ಯ ರೆಸಿಪಿ ಇಲ್ಲಿದೆ

ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುವ ಸ್ಪೆಷಲ್ ಪುಂಡಿ ಸೊಪ್ಪಿನ ಪಲ್ಯ ಮಾಡುವ ಸುಲಭ ರೆಸಿಪಿ ಇಲ್ಲಿದೆ
ಪುಂಡಿ ಪಲ್ಯ ಎಂಬುದು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಅಡುಗೆಯಾಗಿದೆ. ಈ ಪಲ್ಯವನ್ನು ಮುಖ್ಯವಾಗಿ ಪುಂಡಿ ಸೊಪ್ಪಿನಿಂದ ತಯಾರಿಸಲಾಗುತ್ತದೆ. ಈ ಸೊಪ್ಪು ನೈಸರ್ಗಿಕವಾಗಿ ತುಂಬಾ ಹುಳಿಯಾಗಿರುತ್ತದೆ. ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಬಿಸಿ ಜೋಳದ ರೊಟ್ಟಿ, ಈರುಳ್ಳಿ ಮತ್ತು ಬೆಣ್ಣೆಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಪುಂಡಿ ಸೊಪ್ಪು
ತೊಗರಿ ಬೇಳೆ ಅಥವಾ ಕಡಲೆ ಬೇಳೆ:
ಹಸಿ ಶೇಂಗಾ
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ
ಜೀರಿಗೆ
ಜೋಳದ ನುಚ್ಚು ಅಥವಾ ಅಕ್ಕಿ ನುಚ್ಚು:
ಅರಿಶಿನ ಪುಡಿ
ಇಂಗು
ಬೆಲ್ಲ
ಅಡುಗೆ ಎಣ್ಣೆ:
ಉಪ್ಪು

ಮಾಡುವ ವಿಧಾನ

ಮೊದಲು ಒಂದು ಕುಕ್ಕರ್‌ನಲ್ಲಿ ತೊಳೆದ ಪುಂಡಿ ಸೊಪ್ಪು, ತೊಗರಿ ಬೇಳೆ / ಕಡಲೆ ಬೇಳೆ, ಹಸಿ ಶೇಂಗಾ ಮತ್ತು ಹಸಿ ಮೆಣಸಿನಕಾಯಿಗಳನ್ನು ನೀರು ಸೇರಿಸಿ, ಮುಚ್ಚಳ ಮುಚ್ಚಿ 3 ರಿಂದ 4 ಸೀಟಿ ಹೊಡೆಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ಕುಕ್ಕರ್‌ನ ಹೆಚ್ಚುವರಿ ನೀರನ್ನು ಬೇರೆ ಪಾತ್ರೆಗೆ ಬಸಿದು ಇಟ್ಟುಕೊಳ್ಳಬೇಕು.
ನಂತರ ಬೇಯಿಸಿದ ಸೊಪ್ಪು ಮತ್ತು ಬೇಳೆಯ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಒಲೆಯ ಮೇಲಿಡಬೇಕು. ಮಿಶ್ರಣ ಕುದಿಯುವಾಗ ಅದಕ್ಕೆ ಜೋಳದ ನುಚ್ಚು ಅಥವಾ ಅಕ್ಕಿ ನುಚ್ಚನ್ನು ಹಾಕಬೇಕು. ನಂತರ ಜಜ್ಜಿದ ಬೆಳ್ಳುಳ್ಳಿ, ಜೀರಿಗೆ, ಅರಿಶಿನ, ಇಂಗು, ಮತ್ತು ಸ್ವಲ್ಪ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪಾತ್ರೆಯ ಮೇಲೆ ಸಾಮಾನ್ಯ ತಟ್ಟೆ ಮುಚ್ಚಿ ಸಣ್ಣ ಉರಿಯಲ್ಲಿ ನುಚ್ಚು ಬೇಯುವವರೆಗೆ 4-5 ನಿಮಿಷ ಕುದಿಸಬೇಕು. ನುಚ್ಚು ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕದಡಬೇಕು. ಪಲ್ಯ ನೀರಿಲ್ಲದೆ ಗಟ್ಟಿಯಾಗಿ, ಚಟ್ನಿಯ ಹದಕ್ಕೆ ಬರುವವರೆಗೆ ಕುದಿಸಿ ಒಲೆಯಿಂದ ಇಳಿಸಿದರೆ ರುಚಿರುಚಿಯಾದ ಪುಂಡಿ ಪಲ್ಯ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !