April 13, 2026
Monday, April 13, 2026
spot_img

ಯುದ್ಧದ ಕಾರ್ಮೋಡದ ನಡುವೆ ಮಗಳ ಜೊತೆಗೂಡಿ ‘ಕ್ರೂಸ್’ ಕ್ಷಿಪಣಿ ಪರೀಕ್ಷಿಸಿದ ಉ.ಕೊರಿಯಾ ಸರ್ವಾಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಇತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ತಮ್ಮ ಬಲಪ್ರದರ್ಶನಕ್ಕಿಳಿದಿದ್ದಾರೆ. ಅಜ್ಞಾತ ಸ್ಥಳವೊಂದರಲ್ಲಿ ಕಿಮ್ ಜಾಂಗ್ ಉನ್ ಅವರು ತಮ್ಮ ಮಗಳು ಕಿಮ್ ಜು ಏ ಜೊತೆಗೂಡಿ ಭೀಕರ ಸಾಮರ್ಥ್ಯದ ‘ಚೋ ಹ್ಯೋನ್’ ನೌಕಾ ವಿಧ್ವಂಸಕ ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದ್ದಾರೆ.

ಸುಮಾರು 13 ವರ್ಷದ ಕಿಮ್ ಜು ಏ ಇತ್ತೀಚೆಗೆ ತಂದೆಯ ನೆರಳಿನಂತೆ ಎಲ್ಲಾ ಸೇನಾ ಪರೇಡ್ ಹಾಗೂ ಶಸ್ತ್ರಾಸ್ತ್ರ ಪರೀಕ್ಷೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಆಕೆ ಮಿಲಿಟರಿ ಸಮೀಪದ ಕಾನ್ಫರೆನ್ಸ್ ರೂಮ್‌ನಲ್ಲಿ ಕುಳಿತು ತಂದೆಯ ಜೊತೆ ಕ್ಷಿಪಣಿ ಉಡಾವಣೆಯನ್ನು ವೀಕ್ಷಿಸುತ್ತಿರುವ ಫೋಟೋಗಳನ್ನು ಉತ್ತರ ಕೊರಿಯಾದ ಅಧಿಕೃತ ಸಂಸ್ಥೆ ‘ಕೆಸಿಎನ್‌ಎ’ ಬಿಡುಗಡೆ ಮಾಡಿದೆ. ಆಕೆಯೇ ಕಿಮ್ ಜಾಂಗ್ ಉನ್ ಅವರ ಮುಂದಿನ ರಾಜಕೀಯ ಉತ್ತರಾಧಿಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಗಳು ವಿಶ್ಲೇಷಿಸಿವೆ.

ಕ್ಷಿಪಣಿ ಪರೀಕ್ಷೆಯ ಜೊತೆಗೆ ಕಿಮ್ ಜಾಂಗ್ ಅವರು ಸ್ವತಃ ಶೂಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಶತ್ರು ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಕೊರಿಯಾ ದ್ವೀಪಕಲ್ಪದಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !