ಫುಟ್‌ಬೋರ್ಡ್‌ನಲ್ಲಿ ನಿಂತು ಸೋನು ಸೂದ್ ಪ್ರಯಾಣ:ಏನೆಂದಿತು ರೈಲ್ವೆ ಇಲಾಖೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಿದ್ದಕ್ಕಾಗಿ ಉತ್ತರ ರೈಲ್ವೆ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಇದು ಅತ್ಯಂಯ ‘ಅಪಾಯಕಾರಿ’ ಎಂದು ಸೂಚನೆ ನೀಡಿದೆ. ಸೋನು ಸೂದ ಭಾರತದ ಜನರಿಗೆ ಮಾದರಿ ಎಂದು ಕರೆದಿರುವ ಉತ್ತರ ರೈಲ್ವೆ, ಈ ರೀತಿಯ ವೀಡಿಯೊ ರಾಷ್ಟ್ರಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಹೇಳಿದೆ.

ಆತ್ಮೀಯ ಸೋನುಸೂದ್ ಅವರೇ, ನೀವು ದೇಶ ಮತ್ತು ಪ್ರಪಂಚದ ಲಕ್ಷಾಂತರ ಜನರಿಗೆ ಮಾದರಿ. ರೈಲಿನ ಮೆಟ್ಟಿಲುಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ ಮತ್ತು ಈ ರೀತಿಯ ವೀಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ಕಳುಹಿಸಬಹುದು. ದಯವಿಟ್ಟು ಈ ರೀತಿ ಮಾಡಬೇಡಿ! ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ” ಎಂದು ಉತ್ತರ ರೈಲ್ವೆ ಟ್ವೀಟ್ ಮಾಡಿದೆ.

ನಟ ಸೋನು ಸೂದ್ ಡಿಸೆಂಬರ್ 13 ರಂದು ರೈಲು ಪ್ರಯಾಣದ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಈ ಟ್ವೀಟ್ ಬಂದಿದೆ,
ಮುಂಬೈ ರೈಲ್ವೇ ಪೊಲೀಸ್ ಕಮಿಷನರೇಟ್ ಕೂಡ ಅವರಿಗೆ ಎಚ್ಚರಿಕೆ ನೀಡಿದ್ದು, ಇದು ಅಪಾಯಕಾರಿ ಮತ್ತು ನಿಜ ಜೀವನದಲ್ಲಿ ಈ ಸಾಹಸ ಮಾಡದಂತೆ ಮನವಿ ಮಾಡಿದೆ.

ಸೋನುಸೂದ್ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ ‘ಮನರಂಜನೆ’ಯ ಮೂಲವಾಗಿರಬಹುದು, ನಿಜ ಜೀವನದಲ್ಲಿ ಅಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ ಮತ್ತು ಎಲ್ಲರಿಗೂ ‘ಹೊಸ ವರ್ಷದ ಶುಭಾಶಯಗಳು’ ಎಂದು ಎಂದು GRP ಮುಂಬೈ ಟ್ವೀಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!