MUST READ | ಯಶಸ್ವೀ ಜನರು ತಮ್ಮ ದಿನವನ್ನು ಹೀಗೆ ಆರಂಭಿಸುತ್ತಾರಂತೆ.. ನೀವು ಇದನ್ನು ಮಾಡುತ್ತೀರಾ?

ಯಶಸ್ವೀ ಜನರು ತಮ್ಮ ದಿನವನ್ನು ಹೀಗೆ ಆರಂಭಿಸುತ್ತಾರಂತೆ.. ನೀವು ಇದನ್ನು ಮಾಡುತ್ತೀರಾ?
ಬದುಕಿನಲ್ಲಿ ಎಲ್ಲರೂ ಯಶಸ್ವಿಗಳೇ, ಆದರೆ ಅವರದ್ದೇ ರೀತಿಯಲ್ಲಿ. ಎಲ್ಲರೂ ಒಪ್ಪಿಕೊಳ್ಳುವಂತೆ ಯಶಸ್ವಿ ಎನ್ನುವ ಹಾಗೆ ಇರೋದಕ್ಕೆ ಕೆಲವರಿಗೆ ಮಾತ್ರ ಸಾಧ್ಯ.ಇಂಥ ಯಶಸ್ವಿ ಜನರು ದಿನವನ್ನು ಹೇಗೆ ಶುರು ಮಾಡುತ್ತಾರೆ? ಇಲ್ಲಿದೆ ಮಾಹಿತಿ..

  • ದೃಢವಾದ ನಂಬಿಕೆ ಇವರಿಗಿದೆ. ಯಾವುದಾದರೂ ಒಂದು ಸಿದ್ಧಾಂತ, ನಂಬಿಕೆ, ನಿಯಮಕ್ಕೆ ಬದ್ಧರಾಗುತ್ತಾರೆ. ಹಾಗೆ ನಡೆದುಕೊಳ್ಳುತ್ತಾರೆ.
  • ಅಲಾರಾಂ ಆಫ್ ಮಾಡಿ ಐದು ನಿಮಿಷ ಹೆಚ್ಚು ಮಲಗುವ ಅಭ್ಯಾಸ ಇರೋದಿಲ್ಲ. ಬೆಳಗ್ಗೆ ಎದ್ದ ಕೂಡಲೇ ಹಿಂದಿನ ದಿನದ ಭಾರವನ್ನು ಮರೆತು ನಡೆಯುತ್ತಾರೆ.
  • ಮಾನಸಿಕವಾಗಿ ದೃಢವಾಗಿರುವುದು ಎಷ್ಟು ಮುಖ್ಯವೋ ದೈಹಿಕವಾಗಿ ಗಟ್ಟಿಯಾಗುವುದು ಮುಖ್ಯ ಎಂದು ನಂಬುತ್ತಾರೆ. ವ್ಯಾಯಾಮ, ಯೋಗ, ಧ್ಯಾನ ಮಾಡುತ್ತಾರೆ.
  • ತಮ್ಮ ಬಳಿ ಇರುವ ಎಲ್ಲ ವಿಷಯಗಳಿಗೂ ಧನ್ಯರಾಗಿರುತ್ತಾರೆ. ಅದು ವಸ್ತುಗಳೇ ಆಗಿರಬಹುದು, ಹೆಸರು, ಸಂಬಂಧಗಳೇ ಆಗಿರಬಹುದು.
  • ತಮಗಿಂತ ಯಶಸ್ವಿ ಜನರ ಬಗ್ಗೆ ತಿಳಿದುಕೊಳ್ಳುತ್ತಾರೆ, ಪುಸ್ತಕಗಳೇ ಇವರ ಬೆಸ್ಟ್ ಫ್ರೆಂಡ್.
  • ತಮ್ಮ ದಿನಚರಿ ಬರೆಯುವ ಡೈರಿಯನ್ನು ಇಟ್ಟುಕೊಳ್ಳುತ್ತಾರೆ. ಅನಿಸಿದ್ದನ್ನು ನೇರವಾಗಿ ಬರೆಯುತ್ತಾರೆ.
  • ಹಿಂದಿನ ದಿನವೇ ಕೆಲಸ ಕಾರ್ಯಗಳ ಪ್ಲಾನ್ ಮಾಡುತ್ತಾರೆ, ಒಂದು ದಿನದಲ್ಲಿ ಏನೆಲ್ಲಾ ಕೆಲಸ ಆಗಬೇಕು ಎನ್ನುವುದನ್ನು ಗಮನದಲ್ಲಿ ಇಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!