ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ತನಿಖೆ ಪ್ರಕರಣ ಪ್ರಕರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಈ ಹಿಂದೆ 1095 ಸೈಟ್‌ಗಳು ಅಕ್ರಮ ಎಂದು ಪರಿಗಣಿಸಲಾಗಿತ್ತು. ಆದರೆ, ತನಿಖೆ ಮುಂದುವರಿದಂತೆ ಒಟ್ಟು 4,921 ಸೈಟ್‌ಗಳು ಅಕ್ರಮವಾಗಿರುವುದು ಪತ್ತೆಯಾಗಿದೆ.
50:50 ಅನುಪಾತ ಮಾತ್ರವಲ್ಲದೆ, 60:40 ಅನುಪಾತದ ಲೇಔಟ್‌ಗಳನ್ನು ಅಕ್ರಮ ಎಂದು ಘೋಷಿಸಲಾಗಿದೆ. ಹೆಚ್ಚುವರಿ ದಾಖಲೆ ನಕಲಿ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಇ.ಡಿ ತನಿಖೆಯ ವೇಳೆ ಮತ್ತೊಂದು ಸ್ಫೋಟಕ ಅಂಶ ಪತ್ತೆಯಾಗಿದೆ. ಇದು 700 ಕೋಟಿ ಅಕ್ರಮವಲ್ಲ, 2800 ಕೋಟಿ ಅಕ್ರಮ. 13 ವರ್ಷಗಳಲ್ಲಿ 4,921 ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್‌ಗಳನ್ನೇ ಮುಡಾ ಕಬ್ಜಾ ಮಾಡಿತ್ತು. ಕನ್ವರ್ಷನ್ ಲೇಔಟ್‌ಗಳಲ್ಲೂ ಅಕ್ರಮ ಮಾಡಿರುವುದು ತನಿಖೆಯಿಂದ ಬಯಲಾಗಿದೆ.