ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಅದನ್ನು ಪಬ್ಲಿಕ್ ಮಾಡುವ ಹಿಂಟ್ ನೀಡಿದ್ದಾರೆ.
ನನಗೆ ಗರ್ಲ್‌ಫ್ರೆಂಡ್ ಇದ್ದಾಳೆ ಎಂದು ವಿಜಯ್ ಹೇಳಿಕೊಂಡಿದ್ದು, ರಶ್ಮಿಕಾ ಕೂಡ ಸ್ಮೈಲ್‌ನಲ್ಲಿ ವಿಜಯ್ ಹೆಸರಿಗೆ ನಾಚಿಕೊಂಡಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ರಶ್ಮಿಕಾ ವಿಜಯ್ ಕುಟುಂಬವನ್ನು ಪುಷ್ಪಾ-2 ಸಿನಿಮಾ ನೋಡೋದಕ್ಕೆ ಕರೆದುಕೊಂಡು ಬಂದಿದ್ದಾರೆ.
ವಿಜಯ್ ಸಹೋದರ, ತಂದೆ, ತಾಯಿ ಇಲ್ಲಿ ಕಾಣಿಸಿದ್ದಾರೆ. ಶೂಟ್ ಕಾರಣದಿಂದ ವಿಜಯ್ ಸಿನಿಮಾ ನೋಡಲು ಆಗಮಿಸಿಲ್ಲ. ವಿಜಯ್-ರಶ್ಮಿಕಾ ಡೇಟಿಂಗ್‌ನಲ್ಲಿದ್ದಾರೆ ಎಂದು ಊಹೆ ಮೇಲೆ ಮಾತನಾಡುತ್ತಿದ್ದ ಅಭಿಮಾನಿಗಳಿಗೆ ಮತ್ತೊಂದು ಸ್ಟ್ರಾಂಗ್ ಪುರಾವೆ ಸಿಕ್ಕಂತಾಗಿದೆ.