ಅನಿಯಮಿತ ಮುಟ್ಟಿನ ಸಮಸ್ಯೆಯೇ..? ಈ ಕಾರಣಗಳಿರಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರೆಗ್ಯುಲರ್‌ ಪೀರಿಯಡ್ಸ್‌ ಅನೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು. ಬೆನ್ನು ನೋವು, ಕಾಲು ಸೆಳೆತ ಮತ್ತು ಹೊಟ್ಟೆ ನೋವಿನಂತಹ ರೋಗಲಕ್ಷಣಗಳಿದ್ದರೂ ಸಹ ಪಿರಿಯಡ್ಸ್ ಸಂಭವಿಸುವುದಿಲ್ಲ. ಈ ಸಮಸ್ಯೆಯು ಅನೇಕ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

ನಿದ್ರಾಹೀನತೆ, ದೈಹಿಕ ಆಯಾಸ, ಕೆಲಸದ ಒತ್ತಡ, ಮಾನಸಿಕ ಒತ್ತಡ ಮತ್ತು ಹೆಚ್ಚಿನ ಕೆಲಸದ ಹೊರೆ ಕಾರಣವಗುತ್ತದೆ. ಕೆಲವರಿಗೆ ಅಧಿಕ ತೂಕ, ಅಸ್ತಮಾ, ಥೈರಾಯ್ಡ್ ಮತ್ತು ಆನುವಂಶಿಕ ಅಸ್ವಸ್ಥತೆಗಳು ಸಹ ಅನಿಯಮಿತ ಮುಟ್ಟಿನ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವೈದ್ಯರ ಸಲಹೆಗಳನ್ನು ಪರಿಗಣಿಸಿ ಚಿಕಿತ್ಸೆ ನೀಡಬೇಕು.

ಇದರ ಜೊತೆಗೆ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮೂತ್ರಕೋಶದ ಸೋಂಕಿದ್ದರೂ ಈ ಸಮಸ್ಯೆ ಉಂಟಾಗಬಹುದು. ರಕ್ತಹೀನತೆ, ಕಬ್ಬಿಣಾಂಶದ ಕೊರತೆ ಉಂಟಾದಾಗ ದೇಹವು ದುರ್ಬಲವಾಗುತ್ತದೆ. ರಕ್ತಹೀನತೆಯನ್ನು ಹೋಗಲಾಡಿಸಲು ಉತ್ತಮ ಪೌಷ್ಟಿಕಾಂಶವನ್ನು ತೆಗೆದುಕೊಳ್ಳಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!