ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪ್ ಮುಖಂಡ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರು ತಮ್ಮ ಪಕ್ಷದ ಶಾಕರ ಸಭೆ ಕರೆದಿದ್ದಾರೆ. ಆಪ್ ನ ಕೆಲ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಎಷ್ಟು ಶಾಸಕರು ಭಾಗವಹಿಸುತ್ತಾರೆ ಎಂಬುದನ್ನು ಗಮನಿಸಲು ಈ ಸಬೆ ಕರೆಯಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಮದ್ಯದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸರ್ಕಾರದ ವಿರುದ್ಧ ದೆಹಲಿ ಬಿಜೆಪಿ ಪ್ರತಿಭಟನೆಯನ್ನು ಹೆಚ್ಚಿಸಿದ ಒಂದು ದಿನದ ನಂತರ ಪಕ್ಷದ ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲು ಸಭೆಯನ್ನು ಕರೆಯಲಾಗಿದೆ.
ಈ ಹಿಂದೆ, ನಾಲ್ವರು ಆಪ್ ಶಾಸಕರು ತಮ್ಮ ಪಕ್ಷಕ್ಕೆ ಸೇರಲು ಬಿಜೆಪಿ 20 ಕೋಟಿ ರೂ. ಆಫರ್ ನೀಡಿತ್ತು ಎಂದು ಆಪ್ ಆರೋಪಿಸಿತ್ತು.
ಮೂಲಗಳ ಪ್ರಕಾರ ಆಪ್ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ತಮ್ಮ ಪಕ್ಷದ ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.